ಮನ್‌ ಕೀ ಬಾತ್‌ 93ನೇ ಸಂಚಿಕೆಯಲ್ಲಿ ಮೋದಿ ಮಾತು: ಇಲ್ಲಿವೆ ಆಸಕ್ತಿಕರ ಅಂಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಕಾರ್ಯಕ್ರಮವಾದ ಮನ್ ಕಿ ಬಾತ್‌ನ 93 ನೇ ಸಂಚಿಕೆಯಲ್ಲಿ, ಭಾರತೀಯರು ಚಿರತೆಗಳ ಮರಳುವಿಕೆಯಿಂದ ಉತ್ಸುಕರಾಗಿದ್ದಾರೆ ಮತ್ತು ಹೆಮ್ಮೆಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡುವುದಾಗಿಯೂ ಅವರು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಮನ್‌ ಕಿ ಬಾತ್‌ ನ 93ನೇ ಸಂಚಿಕೆಯಲ್ಲಿ ಹಂಚಿಕೊಂಡ ಕೆಲ ಆಸಕ್ತಿಕರ ಅಂಶಗಳು ಇಲ್ಲಿವೆ.

– ಚೀತಾಗಳ ಕುರಿತು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ಹೀಗೆ ವ್ಯಕ್ತಪಡಿಸಿದ್ದಾರೆ “ದೇಶದ ಹಲವು ಮೂಲೆಗಳಿಂದ ಜನರು ಚಿರತೆಗಳ ವಾಪಸಾತಿಗೆ ಸಂತಸ ವ್ಯಕ್ತಪಡಿಸಿದ್ದಾರೆ; 1.3 ಕೋಟಿ ಭಾರತೀಯರು ಉತ್ಸುಕರಾಗಿದ್ದಾರೆ ಮತ್ತು ಹೆಮ್ಮೆ ಪಡುತ್ತಿದ್ದಾರೆ. ಕಾರ್ಯಪಡೆಯು ಚಿರತೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ಅದರ ಆಧಾರದ ಮೇಲೆ ನೀವು ಚಿರತೆಗಳನ್ನು ಯಾವಾಗ ಭೇಟಿ ಮಾಡಬಹುದು ಎಂಬುದನ್ನು ನಾವು ನಿರ್ಧರಿಸುತ್ತೇವೆ,”. ಅಲ್ಲದೇ ಚೀತಾಗಳನ್ನು ಮರುಪರಿಚಯಿಸುವ ಈ ಐತಿಹಾಸಿಕ ಅಭಿಯಾನಕ್ಕೆ ಸೂಕ್ತವಾದ ಹೆಸರನ್ನು ಸೂಚಿಸುವಂತೆಯೂ ಅವರು ಜನರಲ್ಲಿ ವಿನಂತಿಸಿದ್ದಾರೆ.

– ಪಂ.ದೀನ್ ದಯಾಳ್ ಉಪಾಧ್ಯಾಯ ಅವರ 106 ನೇ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ, “ಭಾರತೀಯ ತತ್ವಶಾಸ್ತ್ರವು ಆಧುನಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಲ್ಲಿಯೂ ಜಗತ್ತನ್ನು ಹೇಗೆ ಮಾರ್ಗದರ್ಶಿಸುತ್ತದೆ ಎಂಬುದನ್ನು ದೀನದಯಾಳ್ ಜಿ ನಮಗೆ ಕಲಿಸಿದ್ದಾರೆ” ಎಂದಿದ್ದಾರೆ.

– ಇದೇ ಸೆ.28 ರಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಜನ್ಮದಿನವಿದ್ದು ಅವರನ್ನು ಸ್ಮರಿಸಿದ ಮೋದಿ ಅವರ ಜನ್ಮದಿನವನ್ನು ವಿಸೇಷವಾಗಿ ಆಚರಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್‌ ಸಿಂಗ್‌ ಹೆಸರಿಡುವುದಾಗಿಯೂ ಹೇಳಿದ್ದಾರೆ.

– ಸಾಗರ ಸ್ವಚ್ಛತೆಯ ಕುರಿತಾಗಿ ನಡೆದ ಬಯಸುತ್ತೇನೆ ‘ಸ್ವಚ್ಛ ಸಾಗರ್-ಸುರಕ್ಷಿತ್ ಸಾಗರ್’ ಅಭಿಯಾನದ ಕುರಿತು ಉಲ್ಲೇಖಿಸಿದ ಮೋದಿಯವರು ಈ ಅಭಿಯಾನವನ್ನು ಯಶಸ್ವಿಯಾಗಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ದೇಶದ ಕರಾವಳಿಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿಡಲು ಕೊಡುಗೆ ನೀಡುವಂತೆ ಹೇಳಿದ್ದಾರೆ.

– ಹಬ್ಬಗಳನ್ನು ಉಲ್ಲೇಖಿಸಿದ ಪ್ರಧಾನಿಯವರು ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಸ್ಥಳೀಯ ವಸ್ತುಗಳನ್ನು ಹೆಚ್ಚು ಖರಿದಿಸುವಂತೆ ಕರೆ ನೀಡಿದ್ದಾರೆ. ಅಲ್ಲದೇ ಅ.2ರ ಗಾಂಧಿ ಜಯಂತಿಯಿಂದ ಈ ಅಭಿಯಾನಕ್ಕೆ ಹೊಸ ವೇಗ ಸಿಗಲಿದೆ ಎಂದಿದ್ದಾರೆ.

– ಪರೋಪಕಾರಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ ಎಂದಿರುವ ಅವರು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳುತ್ತಿರುವ ಭಾರತೀಯರ ನಡೆಯನ್ನು ಶ್ಲಾಘಿಸಿದ್ದಾರೆ. ಇದು ಹೀಗೇ ಮುಂದುವರೆದರೆ 2025ರ ವೇಳೆಗಾ ಭಾರತ ಟಿಬಿ ಮುಕ್ತವಾಗಲಿದೆ ಎಂದೂ ಹೇಳಿದ್ದಾರೆ.

– ರಾಗಿ ದಿನಾಚರಣೆ ಆಚರಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದ ಅವರು ಜನರಿಗೆ ರಾಗಿಯ ಮಹತ್ವ ತಿಳಿಸುವ ಸಂಗತಿಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದಾರೆ. ಸರ್ಕಾರವು ರಾಗಿಗೆ ಸಂಬಂಧಿಸಿದಂತೆ ಇ-ಪುಸ್ತಕ ತಯಾರಿಸುತ್ತಿದ್ದು ಮೈ ಗೌವರ್ಮೆಂಟ್‌ ಅಪ್ಲಿಕೇಷನ್‌ ನಲ್ಲಿ ಮಾಹಿತಿ ಹಂಚಿಕೊಳ್ಳುವಂತೆ ತಿಳಿಸಿದ್ದಾರೆ.

– ತಮ್ಮ 93 ನೇ ಮನ್‌ ಕಿ ಬಾತ್‌ ಸಂಚಿಕೆಯನ್ನು ಮುಗಿಸುವ ಮೊದಲು ರಾಷ್ಟ್ರೀಯ ಕ್ರೀಡಾಕೂಟವನ್ನು ಉಲ್ಲೇಖಿಸಿ ಅದರ ವೈಶಿಷ್ಟ್ಯತೆಯ ಕುರಿತು ಮಾತನಾಡಿದ್ದು ಎಲ್ಲಾ ಸ್ಪರ್ಧಾಳುಗಳಿಗೆ ಶುಭಾಶಯ ಕೋರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!