ರಣಭೀಕರ ಇಯಾನ್‌ ಚಂಡಮಾರುತ: ಫ್ಲೋರಿಡಾದಲ್ಲಿ ದೋಣಿ ಮುಳುಗಿ 23ಮಂದಿ ನಾಪತ್ತೆ, ಭೂಕಂಪ, ಪ್ರವಾಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬುಧವಾರ ಸಂಜೆ ಫ್ಲೋರಿಡಾ ಕರಾವಳಿಗೆ ಅಪ್ಪಳಿಸಿದ ಇಯಾನ್‌(Hurricane Ian) ಚಂಡಮಾರುತ ಅಲ್ಲೋಲ-ಕಲ್ಲೋಲವೇ ಸೃಷ್ಟಿಮಾಡಿದೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಅದರಲ್ಲಿದ್ದ 23 ಮಂದಿ ಕಾಣೆಯಾಗಿದ್ದಾರೆ ಎಂದು ಅಮೆರಿಕ ಗಡಿ ತಿರುಗುವ ಗಸ್ತು ಅಧಿಕಾರಿಗಳು ಹೇಳಿದ್ದಾರೆ. ಹಡಗು ಮುಳುಗುತ್ತಿದ್ದಂತೆ ನಾಲ್ವರು ಕ್ಯೂಬನ್ ವಲಸಿಗರು ಈಜಿ ದಡ ಸೇರಿದ್ದು, ಮೂವರನ್ನು ರಕ್ಷಣೆ ಮಾಡಲಾಗಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಎಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ರವಾನೆ ಮಾಡಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫ್ಲೋರಿಡಾ ನಿವಾಸಿಗಳು ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ್ದಾರೆ. ಹಲವಾರು ಮನೆಗಳು ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಹಲವೆಡೆ ಭೂಕಂಪ ಉಂಟಾಗಿದೆ. ಅಲ್ಲದೆ ಚಂಡಮಾರುತ ಅಪ್ಪಳಿಸುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವಂತೆ ಆದೇಶ ಜಾರಿಯಾಗಿದೆ. ಇಯಾನ್ ಚಂಡಮಾರುತವು ಗಾಳಿಯ ವೇಗ 250km/h (155mph) ವರೆಗೆ ಇದ್ದು, ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ಇಯಾನ್ ಚಂಡಮಾರುತದಿಂದಾಗಿ ಪಶ್ಚಿಮ-ಮಧ್ಯ ಫ್ಲೋರಿಡಾದ ಬಹುತೇಕ ಭಾಗವು ಮಳೆನೀರಿನಿಂದ ಪ್ರವಾಹದಲ್ಲಿ ಸಿಲುಕಿದೆ. ಕಾರುಗಳು, ರಸ್ತೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಅಮೆರಿಕದಲ್ಲಿ ಸುಮಾರು 1,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಚಂಡಮಾರುತದ ಭೀಕರತೆಯನ್ನು ವಿಡಿಯೋದಲ್ಲಿ ನೋಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!