ಮಡಿಕೇರಿ: ನಿಷೇಧದ ಬೆನ್ನಲ್ಲೇ ಪಿಎಫ್ಐ ಕಚೇರಿಗೆ ಬೀಗ

ಹೊಸದಿಗಂತ ವರದಿ ಮಡಿಕೇರಿ:
ಪಿ.ಎಫ್.ಐ. ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸಿರುವ ಬೆನ್ನಲ್ಲೇ ಅದರ ಕಚೇರಿಗಳಿಗೂ ಬೀಗ ಜಡಿಯಲಾಗುತ್ತಿದೆ. ಬುಧವಾರ ರಾತ್ರಿ ನಗರದಲ್ಲಿರುವ ಪಿಎಫ್.ಐ ಕಚೇರಿಗೂ ಬೀಗ ಜಡಿಯಲಾಗಿದೆ.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರ ಆದೇಶದ ಹಿನ್ನೆಲೆಯಲ್ಲಿ ಮಡಿಕೇರಿ ಉಪ ವಿಭಾಗಧಿಕಾರಿ ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ನಗರದ ಮಹದೇವಪೇಟೆಯಲ್ಲಿರುವ ಕಚೇರಿಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮಧ್ಯರಾತ್ರಿ 12.30ರವರೆಗೂ ತಪಾಸಣೆ ನಡೆಸಿತು. ಬಳಿಕ ಕಚೇರಿಗೆ ಬೀಗ ಜಡಿಯಲಾಯಿತು.ಮಡಿಕೇರಿ ತಾಲೂಕು ದಂಡಾಧಿಕಾರಿ ಪಿ.ಎಸ್. ಮಹೇಶ್ ಹಾಗೂ ನಗರ ಪೊಲೀಸರು ಸಾಥ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!