ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ, ಇದೀಗ ಗುಡ್ಬೈ ಪ್ರಮೋಷನ್ಸ್ನಲ್ಲಿ ತೊಡಗಿರೋ ರಶ್ಮಿಕಾ ನಮ್ಮ ಫೇವರೆಟ್ ಹೀರೋಯಿನ್ನ್ನು ಭೇಟಿ ಮಾಡಿದ್ದಾರೆ.
ಯಾರು ಗೊತ್ತಾ ರಶ್ಮಿಕಾ ಕನಸಿನ ಹೀರೋಯಿನ್, ಇನ್ಯಾರೂ ಅಲ್ಲ, ಮಾಧುರಿ ದೀಕ್ಷಿತ್. ಹೌದು ಡ್ಯಾನ್ಸ್ ಶೋನಲ್ಲಿ ಪ್ರಮೋಷನ್ಗೆ ತೆರಳಿದ್ದ ರಶ್ಮಿಕಾ ಮಾಧುರಿ ದೀಕ್ಷಿತ್ ಜೊತೆ ಹೆಜ್ಜೆ ಹಾಕಿದ್ದಾರೆ. ಚಿಕ್ಕಂದಿನಿಂದ ಇವರ ಹಾಡುಗಳನ್ನು ನೋಡ್ತಾ ಬಂದಿದ್ದೇನೆ, ಇವರ ಎಕ್ಸ್ಪ್ರೆಶನ್ ಕಾಪಿ ಮಾಡಲು ಯತ್ನಿಸಿದ್ದೇನೆ. ಇದೀಗ ಇವರ ಪಕ್ಕದಲ್ಲೇ ನಿಂತಿದ್ದೇನೆ ಎಂದರೆ ನಂಬೋದಕ್ಕೆ ಅಸಾಧ್ಯ. ನನಗೆ ಇದು ಫ್ಯಾನ್ ಗರ್ಲ್ ಮೂಮೆಂಟ್ ಎಂದಿದ್ದಾರೆ.