Saturday, December 10, 2022

Latest Posts

ಕಾಂಗ್ರೆಸ್‌ನಲ್ಲಿ ಯಾರೇ ಅಧ್ಯಕ್ಷರಾದರೂ ಅವರು ರಿಮೋಟ್ ಕಂಟ್ರೋಲ್‌ನಲ್ಲಿರ‍್ತಾರೆ: ಸಚಿವ ಪ್ರಹ್ಲಾದ ಜೋಶಿ

ದಿಗಂತ ವರದಿ ವಿಜಯಪುರ:

ಕಾಂಗ್ರೆಸ್ ಪಕ್ಷದಲ್ಲಿ ಯಾರೇ ಅಧ್ಯಕ್ಷರಾದರು ಅವರು ರಿಮೋಟ್‌ ಕಂಟ್ರೋಲ್‌ ಇರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದರೂ ಯಾವುದೇ ಅರ್ಥವಿಲ್ಲ, ಕಾಂಗ್ರೆಸನಲ್ಲಿ ಯಾರೇ ಅಧ್ಯಕ್ಷರು ಆದರೂ ಅವರು ರಿಮೋಟ್‌ ಕಂಟ್ರೋಲ್‌ ಇರುತ್ತಾರೆ. ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ರಿಮೋಟ್‌ ಕಂಟ್ರೋಲ್‌ ಇದ್ದರು ಎಂದರು.

ರಾಹುಲ್ ಗಾಂಧಿಯವರು ಅವರಿಗೆ ಜವಾಬ್ದಾರಿ ಇಲ್ಲ. ಅವರಿಗೆ ರಾಜಕೀಯ ಗಂಭೀರತೆ ಇಲ್ಲ ಎಂದು ಟೀಕಿಸಿದರು. ಗ್ರೆಸ್ ಪಕ್ಷ ಕೆಲ ಚುನಾವಣೆಯನ್ನು ಗೆದ್ದಿರುವುದು ಅಲ್ಲಿನ ಸ್ಥಳೀಯ ನಾಯಕರಿಂದ ಮಾತ್ರ. ಯಾವುದೇ ರಾಷ್ಟ್ರೀಯ ನಾಯಕರಿಂದ ಅಲ್ಲ ಎಂದರು. ರಾಹುಲ್ ಗಾಂಧಿಯವರದು ಭಾರತ್ ಜೋಡೊ ಯಾತ್ರೆ ಅಲ್ಲ. ಅದು ಭಾರತ್ ತೋಡೊ ಯಾತ್ರೆ. ಅದು ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದರು.

ಈಗ ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಬಿಜೆಪಿಯರು ಯಾರೂ ಈ ಬಗ್ಗೆ ತಲೆ ಕೇಡಿಸಿಕೊಳ್ಳವುದಿಲ್ಲ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!