ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ತಾರೆಯರ ಜತೆ ಫೋಟೊ ಕ್ಲಿಕ್ಕಿಸಿಕೊಳ್ಳುವುದು ಎಲ್ಲ ಅಭಿಮಾನಿಗಳ ಆಸೆ. ಇದಕ್ಕಾಗಿ ಸ್ಟಾರ್‌ಗಳ ಮನೆ ಮುಂದೆ ಗಂಟೆಗಟ್ಟಲೆ ಕಾಯುವುದಕ್ಕೂ ಅಭಿಮಾನಿಗಳು ತಯಾರಿರುತ್ತಾರೆ.
ಇದೇ ರೀತಿ ಏರ್‌ಪೋರ್ಟ್‌ನಲ್ಲಿ ಕರೀನಾ ಕಪೂರ್ ಖಾನ್ ಜತೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದ ಅಭಿಮಾನಿ, ಆಕೆಯ ಹೆಗಲ ಮೇಲೆ ಕೈ ಹಾಕಿದ್ದಾನೆ. ಸಾಮಾನ್ಯವಾಗಿ ನಮ್ಮ ಪ್ರೀತಿಪಾತ್ರರ ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆದುಕೊಳ್ಳುತ್ತೇವೆ. ಇವರು ನಮಗೆ ತುಂಬಾ ಆತ್ಮೀಯರು ಎನ್ನುವಂತೆ ಅಭಿಮಾನಿ ಕೈ ಹಾಕಲು ಬಂದಿದ್ದಾರೆ. ಕರೀನಾ ಬಾಡಿಗಾರ್ಡ್ ಕೈ ತೆಗೆಸಿದ್ದಾರೆ. ಅಭಿಮಾನಿಯನ್ನು ಕಂಡು ಇರಿಸುಮುರಿಸಾದರೂ ಕರೀನಾ ಏನೂ ರಿಯಾಕ್ಟ್ ಮಾಡದೇ ಮುಂದೆ ನಡೆದಿದ್ದಾರೆ.