ಶಿವಮೊಗ್ಗ ಎಸ್ಪಿ ಡಾ. ಲಕ್ಷ್ಮೀ ಪ್ರಸಾದ್ ವರ್ಗಾವಣೆ

ಹೊಸದಿಗಂತ ವರದಿ, ಶಿವಮೊಗ್ಗ:

ದಿಢೀರ್ ಬೆಳವಣಿಗೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಆದೇಶ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅವರ ಸ್ಥಾನಕ್ಕೆ ಬೆಂಗಳೂರಿನ ಅಪರಾಧ ತನಿಖಾ  ದಳದಲ್ಲಿ  ಎಸ್ಪಿಯಾಗಿದ್ದ ಜಿ.ಕೆ. ಮಿಥುನ್ ಕುಮಾರ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಕಳೆದ ವರ್ಷ ಏಪ್ರಿಲ್ 02 ರಂದು ಬಿ.ಎಂ.ಲಕ್ಷ್ಮೀಪ್ರಸಾದ್ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಕಾರ ವಹಿಸಿಕೊಂಡಿದ್ದರು. ಇಲ್ಲಿಗೆ ಬಂದ ನಂತರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗೆ ಕಾರಣರಾಗಿದ್ದರು. ತಮ್ಮ ತಾಂತ್ರಿಕ ಪರಿಣತಿ ಬಳಸಿ ಇತ್ತೀಚೆಗೆ ಶಂಕಿತ ಉಗ್ರರನ್ನು ಪತ್ತೆಮಾಡಿ ಜೈಲಿಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಮುಖ ಘಟನೆಗಳು ಸಂಭವಿಸಿದಾಗ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಇಲಾಖೆಗೆ ಹೆಸರು ತಂದುಕೊಟ್ಟಿದ್ದರು. ನಗರದಲ್ಲಿ ಸಂಭವಿಸಿದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಆರೋಪಿಗಳನ್ನು ಅದೇ ದಿನ ರಾತ್ರಿಯೇ ಬಂಧಿಸುವಲ್ಲಿ ಯಶಸ್ಸು ಕಂಡಿದ್ದರು.
ಪ್ರೇಮ್‌ಸಿಂಗ್‌ಗೆ ಚಾಕು ಇರಿತ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ, ಅವರಿಗೆ ಇದ್ದ ಇತರೆ ಸಂಪರ್ಕವನ್ನು ಬಯಲಿಗೆ ತಂದಿದ್ದರು. ಅದರ ಜೊತೆಗೆ ಶಂಕಿತ ಉಗ್ರರನ್ನು ಪತ್ತೆ ಮಾಡಿ ಜೈಲಿಗಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!