ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಹಾಸ್ಯನಟ ರಾಜು ಶ್ರೀವಾತ್ಸವ್ ಮೃತಪಟ್ಟಿದ್ದು, ಮನರಂಜನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿತ್ತು. ಇದೀಗ ಹಾಸ್ಯನಟ ಪರಾಗ್ ಕನ್ಸಾರಾ ಮೃತಪಟ್ಟಿದ್ದು, ಮನರಂಜನಾ ಕ್ಷೇತ್ರ ಆಘಾತದಲ್ಲಿದೆ.
ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಗ್ ಶೋನಿಂದ ಹೆಚ್ಚು ಖ್ಯಾತಿ ಪಡೆದಿದ್ದ ಪರಾಗ್ ಮೃತಪಟ್ಟಿದ್ದಾರೆ. ಈ ಬಗ್ಗೆ ಪರಾಗ್ ಸ್ನೇಹಿತ ಸುನೀಲ್ ಪಾಲ್ ದುಃಖ ವ್ಯಕ್ತಪಡಿಸಿದ್ದಾರೆ.
ಮನರಂಜನಾ ವಲಯದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಲಾಫ್ಟರ್ ಚಾಲೆಂಜ್ನ ಪರಾಗ್ ಮೃತಪಟ್ಟಿದ್ದಾರೆ. ರಿವರ್ಸ್ ಥಿಂಕಿಂಗ್ ಕಾಮಿಡಿ ಮೂಲಕ ನಮ್ಮನ್ನೆಲ್ಲ ನಗಿಸುತ್ತಿದ್ದ ಪರಾಗ್ ಇನ್ನಿಲ್ಲ ಎನ್ನುವುದು ನಂಬಲಸಾಧ್ಯ. ಜಗತ್ತನ್ನೇ ನಗಿಸುವ ಕಾಮಿಡಿಯನ್ಗಳ ಕುಟುಂಬಕ್ಕೆ ಅಳುವ ಪರಿಸ್ಥಿತಿ ಏಕೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.