ಅಮೆರಿಕದ ಶ್ವೇತಭವನದಲ್ಲಿ ದೀಪಾವಳಿ ಆಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಈ ವರ್ಷ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಲು ಯೋಜಿಸಿದ್ದಾರೆ ಎಂದು ಶ್ವೇತ ಭವನದ ವಕ್ತಾರರು ತಿಳಿಸಿದ್ದಾರೆ.

ಆದರೆ ಆಚರಣೆ ಕುರಿತಾದ ಸಿದ್ಧತೆಗಳ ವಿವರಗಳು ಮತ್ತು ಸ್ವರೂಪವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

“ಹೌದು, ಅವರು ಕಳೆದ ವರ್ಷದಂತೆ ದೀಪಾವಳಿಯನ್ನು ಆಚರಿಸಲು ಯೋಜಿಸಿದ್ದಾರೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೆನ್ ಜೀನ್-ಪಿಯರ್ ತಮ್ಮ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದು “ಆಚರಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಆದರೆ  ಈ ದೇಶದಲ್ಲಿ ಭಾರತ ಮತ್ತು ಭಾರತೀಯ ಅಮೆರಿಕನ್ನರೊಂದಿಗೆ ಪಾಲುದಾರಿಕೆಯು ಹೆಚ್ಚಿರುವುದರಿಂದ ಇದು ಬಹಳ ಮುಖ್ಯವೆಂದು ಬಿಡೆನ್ ಭಾವಿಸುತ್ತಾರೆ” ಎಂದು ಜೀನ್-ಪಿಯರ್ ಹೇಳಿದ್ದಾರೆ.

ಏತನ್ಮಧ್ಯೆ, ಮೇರಿಲ್ಯಾಂಡ್ ಗವರ್ನರ್ ಲಾರೆನ್ಸ್ ಹೊಗನ್ ಅವರು ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆಯ ತಿಂಗಳು ಎಂದು ಘೋಷಿಸಿದ್ದಾರೆ.

ಬುಷ್ ಆಡಳಿತದಿಂದ ಆರಂಭಿಸಿ, ಪ್ರತಿ ವರ್ಷ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!