ಹೊಸ ದಿಗಂತ ಡಿಜಿಟಲ್ ಡೆಸ್ಕ್
1947-48ನೇ ಸಾಲಿನಲ್ಲಿ ಭಾರತದಲ್ಲಿದ್ದ ಸರ್ಕಾರಿ ಶಾಲೆಗಳ ಸಂಖ್ಯೆ ಒಂದುಲಕ್ಷ ಚಿಲ್ಲರೆ (1,40,794). 2020-21ಕ್ಕೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಈ ಸಂಖ್ಯೆ 15 ಲಕ್ಷಕ್ಕೂ ಹೆಚ್ಚು (15,09,136).
ನಿಜ. ಭಾರತದ ಜನಸಂಖ್ಯೆಯೂ ಸ್ವಾತಂತ್ರ್ಯ ದೊರಕಿದ ಕಾಲಕ್ಕೆ ಹೋಲಿಸಿದರೆ ಭಾರಿ ಹೆಚ್ಚಳವಾಗಿದೆ.
ಸರ್ವಶಿಕ್ಷಾ ಅಭಿಯಾನ, ಸ್ವಚ್ಛತಾ ವಿದ್ಯಾಲಯ ಮತ್ತು ಇದೀಗ ಅನುಷ್ಠಾನವಾಗುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇವನ್ನೆಲ್ಲ 75 ವರ್ಷಗಳ ಸ್ವತಂತ್ರ ಭಾರತಯಾತ್ರೆಯ ಪ್ರಮುಖ ಹೆಜ್ಜೆಗಳನ್ನಾಗಿ ಗುರುತಿಸಬಹುದು.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತದ ಅಡಿ ದೊಡ್ಡಮಟ್ಟದಲ್ಲಿ ಶೌಚಾಲಯ ನಿರ್ಮಾಣಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಸ್ವಚ್ಛತಾ ವಿದ್ಯಾಲಯ ಎಂಬ ಯೋಜನೆ ತಂದದ್ದರಿಂದ, ಒಂದೇ ವರ್ಷದಲ್ಲಿ ಎಲ್ಲ ಸರ್ಕಾರಿ ಶಾಲೆಗಳು ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ಹೊಂದುವಂತಾಯಿತು. ಬಾಲೆಯರ ಶಿಕ್ಷಣಕ್ಕೆ, ಅವರು ಮುಜುಗರದ ಕಾರಣಕ್ಕೆ ಶಾಲೆಯಿಂದ ದೂರ ಉಳಿಯದಂತೆ ಮಾಡುವುದಕ್ಕೆ ಈ ಕ್ರಮ ಗಣನೀಯ ಕೊಡುಗೆ ನೀಡಿತು.