ದಿನಭವಿಷ್ಯ| ಸಮಸ್ಯೆಗಳನ್ನು ಬದಿಗಿಟ್ಟು ಸಂತೋಷದಿಂದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಯತ್ನಿಸಿ. ಸಮಸ್ಯೆಗಳನ್ನು ಬದಿಗಿಟ್ಟು ಸಂತೋಷ  ತರುವ ಹೊಸ ಕಾರ್ಯಕ್ಕೆ ಹೊರಡಿ.

ವೃಷಭ
ಇಂದು ಹಲವು ಕಾರ್ಯಗಳನ್ನು ಏಕಕಾಲದಲ್ಲಿ ಮುಗಿಸಬೇಕಾದ ಒತ್ತಡ. ಜಾಣ್ಮೆಯಿಂದ ಕಾರ್ಯ ನಿಭಾಯಿಸಿದರೆ ಯಶ ಕಾಣುವಿರಿ.

ಮಿಥುನ
ಕುಟುಂಬದ ಹಿತಾಸಕ್ತಿಗೆ ಹೆಚ್ಚು ಆದ್ಯತೆ ಕೊಡಬೇಕು. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು. ಆರ್ಥಿಕ ಸಮಸ್ಯೆ ಕಾಡುವುದು.

ಕಟಕ
ಹಲವು ಬಿಕ್ಕಟ್ಟುಗಳನ್ನು ಏಕಕಾಲದಲ್ಲಿ ಎದುರಿಸುವಿರಿ. ತಾಳ್ಮೆಯಿಂದ ವ್ಯವಹರಿಸಬೇಕು. ಇಲ್ಲವಾದರೆ ಇನ್ನಷ್ಟು ಗೊಂದಲ ಸೃಷ್ಟಿ.

ಸಿಂಹ
ಸಂತೋಷದ ದಿನ. ಇತರರ ಸಮಸ್ಯೆ ಪರಿಹರಿಸಲು ನೀವು ಮತ್ತು ಕುಟುಂಬಸ್ಥರು ಮುಂದಾಗುವಿರಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ.

ಕನ್ಯಾ
ಯೋಜನಾಬದ್ಧವಾಗಿ ಕಾರ್ಯ ನಿರ್ವಹಿಸುವಿರಿ. ಆದರೂ ನಿಮಗೆ ದೊರಕುವ ಪ್ರತಿಫಲ ವಿಳಂಬವೇ ಆಗುವುದು. ನಿರಾಶೆ ಮತ್ತು ಹತಾಶೆ.

ತುಲಾ
ಉದ್ಯಮದಲ್ಲಿ ಯಶಸ್ಸು. ವ್ಯಾಪಾರ ವಹಿವಾಟು ಸುಗಮವಾಗಿ ಸಾಗುವುದು. ಕಳೆದ ಕೆಲವು ದಿನಗಳ ಸಮಸ್ಯೆಯು ನಿಧಾನ ವಾಗಿ ನೀಗುವುದು.

ವೃಶ್ಚಿಕ
ಒಳ್ಳೆ ಆಹಾರ ಸೇವಿಸಿ. ಇಲ್ಲವಾದರೆ ಆರೋಗ್ಯ ಸಮಸ್ಯೆ. ಧನ ಲಾಭ, ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ಸಂಗಾತಿಯಿಂದ ಉತ್ತಮ ಬೆಂಬಲ.

ಧನು
ಎಚ್ಚರದಿಂದ ಹೆಜ್ಜೆ ಯಿಡಿ. ಕೆಲವರು ನಿಮ್ಮ ಕಾರ್ಯವಿಧಾನ ಮೆಚ್ಚುವುದಿಲ್ಲ. ಅವರ ವಿಚಾರದಲ್ಲಿ  ನೀವು ಹಸ್ತಕ್ಷೇಪ ನಡೆಸುವುದನ್ನು ಸಹಿಸೋಲ್ಲ.

ಮಕರ
ಆರ್ಥಿಕ ಪರಿಸ್ಥಿತಿ ಯನ್ನು ಸುಧಾರಿಸಲು ನೀವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕುಟುಂಬದಲ್ಲಿ ವಾಗ್ವಾದ ನಡೆದೀತು. ಸಹನ ಕಳಕೊಳ್ಳದಿರಿ.

ಕುಂಭ
ಬಿಡುವಿಲ್ಲದ ಕೆಲಸ. ಮನೆ ಮತ್ತು ವೃತ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಮಯ ಕೊಡಬೇಕಾಗುವುದು. ಆರ್ಥಿಕ ಒತ್ತಡ.

ಮೀನ
ಅನಿರೀಕ್ಷಿತ ಖರ್ಚು. ಸಹೋದ್ಯೋಗಿಯೊಬ್ಬ ನಿಮ್ಮ ವಿರುದ್ಧವಾಗಿ ಕಾರ್ಯಾಚರಿಸುವನು. ಮಹಿಳೆಯರು ಆರೋಗ್ಯದ ಕಾಳಜಿ ವಹಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!