ಹೊಸದಿಗಂತ ಡಿಜಿಟಲ್ ಡೆಸ್ಕ್:
2022 ರಲ್ಲಿ ವಿಶ್ವದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಪಟ್ಟಿಯಲ್ಲಿ ಭಾರತದ ಏಕೈಕ ಕಂಪನಿ ಟಾಟಾ ಗ್ರೂಪ್ ಸೇರಿದೆ.
ಅತ್ಯಂತ ಮೌಲ್ಯಯುತ 100 ಬ್ರ್ಯಾಂಡ್‌ಗಳ ಪಟ್ಟಿಯನ್ನು ಆನ್ಯುಯಲ್ ಗ್ಲೋಬಲ್ 500 ಬಿಡುಗಡೆ ಮಾಡಿದ್ದು, ಭಾರತದ ಏಕೈಕ ಕಂಪನಿ ಟಾಟಾ ಗ್ರೂಪ್ 77 ನೇ ಸ್ಥಾನದಲ್ಲಿದೆ.
ಆಪಲ್, ಗೂಗಲ್, ಮೈಕ್ರೋಸಾಫ್ಟ್, ಅಮೇಜಾನ್ ಹಾಗೂ ಫೇಸ್‌ಬುಕ್ ಟಾಪ್ 5 ಸ್ಥಾನ ಪಡೆದಿವೆ. 260.7 ಶತಕೋಟಿ ಡಾಲರ್ ಮೌಲ್ಯದೊಂದಿದೆ ಆಪಲ್ ಮೊದಲ ಸ್ಥಾನ ಪಡೆದಿದೆ.
ಆಟೋಮೊಬೈಲ್ ಉದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಟಾಟಾ ಗ್ರೂಪ್ ಇತ್ತೀಚೆಗೆ ಭಾರೀ ಪ್ರಶಂಸೆ ಪಡೆದಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ ಕಾರುಗಳ ಮೂಲಕ ಟಾಟಾ ಗ್ರೂಪ್ ಭವಿಷ್ಯದ ಹಾದಿಯಲ್ಲಿದೆ.
ಆಪಲ್, ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ವಾಲ್‌ಮಾರ್ಟ್, ಸ್ಯಾಮ್‌ಸಂಗ್, ಫೇಸ್‌ಬುಕ್, ಐಸಿಬಿಸಿ, ಹುವಾವೆ ಹಾಗೂ ವೆರಿಜಾನ್ ಮೊದಲ 10 ಸ್ಥಾನ ಪಡೆದಿವೆ.