ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆರ್ಥಿಕ ಏಳಿಗೆಗಾಗಿ ನೋಟುಗಳ ಮೇಲೆ ಲಕ್ಷ್ಮಿ, ಗಣೇಶ ದೇವರ ಚಿತ್ರ ಮುದ್ರಿಸಿ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರವೊಂದನ್ನು ಬರೆದಿದ್ದು, ಭಾರತೀಯ ಕರೆನ್ಸಿಯ ಒಂದು ಬದಿಯಲ್ಲಿ ಗಾಂಧೀಜಿ, ಇನ್ನೊಂದು ಬದಿಯಲ್ಲಿ ಲಕ್ಷ್ಮಿ ಹಾಗೂ ಗಣೇಶ ದೇವರ ಚಿತ್ರ ಇರಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಎಷ್ಟೇ ಅಭಿವೃದ್ಧಿಯಾದರೂ ನಮ್ಮಲ್ಲಿ ಇನ್ನೂ ಬಡತನ ಏಕೆ? ನಮ್ಮದು ಇಷ್ಟು ಸಮಯಕ್ಕೆ ಮುಂದುವರಿದ ರಾಷ್ಟ್ರವಾಗಬೇಕಿದ್ದು, ಇನ್ನೂ ಮುಂದುವರಿಯುತ್ತಿರುವ ರಾಷ್ಟ್ರವಾಗಿದೆ. ಕಷ್ಟಪಟ್ಟು ದುಡಿಯುವುದರ ಜೊತೆ ದೇವರ ಆಶೀರ್ವಾದವೂ ಇರಬೇಕು. ಆಗ ಮಾತ್ರ ನಾವು ಮುಂದುವರಿಯಲು ಸಹಾಯವಾಗುತ್ತದೆ. ಈ ವಿಷಯಕ್ಕೆ ಎಲ್ಲೆಡೆ ಬೆಂಬಲ ಇದೆ, ಜನ ಇದನ್ನು ಬೆಂಬಲಿಸುತ್ತಾರೆ. ಇದರ ಬಗ್ಗೆ ಜನ ಉತ್ಸುಕರಾಗಿದ್ದಾರೆ, ಇದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.