ಬಿಜೆಪಿ ಹಿಂದುಳಿದ ಸಮುದಾಯಗಳಿಗೆ ಸಾಕಷ್ಟು ಯೋಜನೆ ನೀಡಿದೆ: ಶಾಸಕಿ ರೂಪಾಲಿ ನಾಯಕ್

ಹೊಸದಿಗಂತ ವರದಿ, ಕಲಬುರಗಿ:
ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲ ಸಮುದಾಯಗಳು ಮೇಲಕ್ಕೆ ಬರಲು ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ ಎಂದು ಶಾಸಕಿ ರೂಪಾಲಿ ನಾಯಕ್ ಹೇಳಿದರು.
ಬಿಜೆಪಿ ಪಕ್ಷದ ವತಿಯಿಂದ ನಗರದ ನಾಗನಹಳ್ಳಿಯ ರದ್ದೇವಾಡಗಿ ಲೇಔಟ್ ನಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ವಿರಾಟ್ ಸಮಾವೇಶದಲ್ಲಿ  ಮಾತನಾಡಿದರು.
ನರೇಂದ್ರ ಮೋದಿಯವರರು ದೇಶವನ್ನು ಆಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರತಿ ವ್ಯಕ್ತಿ ಮೇಲಕ್ಕೆ ಬರಲು ಬಿಜೆಪಿ ಹಲವು ಯೋಜನೆಗಳನ್ನು ನೀಡಿದೆ. ಹಿಂದೂಳಿದ ವರ್ಗಗಳ ಅಭಿವೃದ್ಧಿಗಾಗಿ ಸುಮಾರು 450 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ನೀಡಿದೆ ಎಂದರು.
ಕಾಂಗ್ರೆಸ್ ಪಕ್ಷ ಭಾರತ ಜೋಡೋ ಯಾತ್ರೆ ಮಾಡುತ್ತಿದೆ. ಭಾರತವನ್ನು ಈ ಮೊದಲು ತಂಡರಿಸಿ ಇದೀಗ ಜೋಡೋ ನೆಪದ ಮೂಲಕ ಯಾತ್ರೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಕೋವಿಡ್ ಸಮಯದಲ್ಲಿ ವ್ಯಾಕ್ಸಿನ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡಿ ಅಪಪ್ರಚಾರ ಮಾಡಿತ್ತು. ನರೇಂದ್ರ ಮೋದಿಯವರ ಸರ್ಕಾರ ಇಡೀ ವಿಶ್ವಕ್ಕೆ ಭಾರತ ದೇಶ ವ್ಯಾಕ್ಸಿನೇಷನ್ ರವಾನೆ ಮಾಡಿ,‌ ಕೋವಿಡ್ ಜೊತೆಗೆ ಫೈಟ್ ಮಾಡಿದೆ ಎಂದರು. ಜನರ ಜೀವನ ಆರ್ಥೀಕವಾಗಿ ರೂಪಗೊಳ್ಳಬೇಕೆಂಬ ಕನಸು ಪ್ರಧಾನಿ ನರೇಂದ್ರ ಮೋದಿಯವರ ಹೊಂದಿದ್ದಾರೆ. ಹೀಗಾಗಿ ಅವರಿಗೆ ನಾವು ಕೃತಜ್ಞತೆಗಳು ಸಲ್ಲಿಸಬೇಕಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!