ಸೌರಶಕ್ತಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ: ಇಂದಿನ ಮನ್‌ ಕೀ ಬಾತ್‌ ಮುಖ್ಯಾಂಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ಮೋದಿಯವರು ಪ್ರತಿತಿಂಗಳು ನಡೆಸಿಕೊಡುವ ʼಮನ್‌ ಕೀ ಬಾತ್‌ʼ ಕಾರ್ಯಕ್ರಮದ 94ನೇ ಸಂಚಿಕೆಯಲ್ಲಿ ಸೌರ ಶಕ್ತಿ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಮೋದಿ ಶ್ಲಾಘಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿ ಶಕ್ತಿ ಭಾರತವನ್ನು ಶಕ್ತಿಯುತವಾಗಿಸುತ್ತದೆ ಎಂದಿರುವ ಅವರು ಪರಿಸರ ಕಾಳಜಿಯ ಕುರಿತಾಗಿಯೂ ಬೆಳಕು ಚೆಲ್ಲಿದ್ದಾರೆ. ದೇಶವನ್ನು ಸದೃಢವಾಗಿಸುವಲ್ಲಿ ಯುವಕರ ಪಾತ್ರದ ಬಗ್ಗೆ ವಿವರಿಸಿದ ಅವರು ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲರ್‌ ಜನ್ಮದಿನದ ಹೊಸ್ತಿಲಲ್ಲಿ ರಾಷ್ಟ್ರೀಯ ಐಕ್ಯತಾ ದಿವಸದ ಬಗ್ಗೆಯೂ ಮಾತನಾಡಿದ್ದಾರೆ.

ಇಂದಿನ ʼಮನ್‌ ಕೀ ಬಾತ್‌ʼ ಸಂಚಿಕೆಯ ಕೆಲ ಮುಖ್ಯಾಂಶಗಳು ಇಲ್ಲಿವೆ.

  • ಸಂಚಿಕೆಯ ಆರಂಭದಲ್ಲಿ ಛತ್‌ ಪೂಜೆಯ ಶುಭಾಶಯ ತಿಳಿಸಿದ ಮೋದಿಯವರು ದೇಶದ ಹಲವು ಭಾಗಗಳಲ್ಲಿ ಸೂರ್ಯಾರಾಧನೆಯ ಮಹಾ ಹಬ್ಬವಾದ ‘ಛತ್’ ಆಚರಿಸಲಾಗುತ್ತಿದೆ, ಛತ್ ಮೈಯಾ ಎಲ್ಲರಿಗೂ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ವಿದೇಶಗಳಲ್ಲಿ ಛಠ್ ಪೂಜೆಯ ಇಂತಹ ಭವ್ಯವಾದ ಚಿತ್ರಗಳನ್ನು ನಾವು ನೋಡುತ್ತೇವೆ ಎಂದರೆ ಭಾರತೀಯ ಸಂಸ್ಕೃತಿ ಮತ್ತು ಅದರ ನಂಬಿಕೆಯು ಪ್ರಪಂಚದ ಮೂಲೆ ಮೂಲೆಗಳಲ್ಲಿ ಛಾಪು ಮೂಡಿಸುತ್ತಿದೆ ಎಂದಿದ್ದಾರೆ.
  • ಸೌರಶಕ್ತಿಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಸೌರಶಕ್ತಿಯಲ್ಲಿ, ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಸೌರಶಕ್ತಿಯು ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದು ಅಧ್ಯಯನದ ವಿಷಯವಾಗಿದೆ ಎಂದು ಹೇಳಿದರು. ಗುಜರಾತ್‌ನ ಮೊಧೇರಾ ಗ್ರಾಮದಲ್ಲಿ ಬಹುತೇಕ ಎಲ್ಲಾ ಮನೆಗಳು ತಮ್ಮ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಸೌರಶಕ್ತಿಯನ್ನು ಬಳಸುತ್ತವೆ. ಅಲ್ಲಿನ ಜನರು ಸೌರಶಕ್ತಿಯ ಮೂಲಕ ವಿದ್ಯುತ್ ಅನ್ನು ಬಳಸುವುದಲ್ಲದೆ, ಅದರಿಂದ ಆದಾಯವನ್ನೂ ಸಹ ಪಡೆಯುತ್ತಿದ್ದಾರೆ. ದೇಶವು ಸೌರ ಶಕ್ತಿಯ ವಿಷಯದಲ್ಲಿ ಅಪಾರ ಸಾಧನೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.
  • ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲೂ ಅದ್ಭುತಗಳನ್ನು ಮಾಡುತ್ತಿದೆ. ಇಡೀ ಜಗತ್ತು ಇಂದು ಭಾರತದ ಸಾಧನೆಗಳನ್ನು ನೋಡಿ ಬೆರಗಾಗಿದೆ. ಭಾರತದ ಯುವಕರಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದ ನಂತರ, ಅದರಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಬರಲು ಪ್ರಾರಂಭಿಸಿದವು. ಭಾರತವು ಏಕಕಾಲದಲ್ಲಿ 36 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಇರಿಸಿದೆ. ಇದರೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಕಚ್‌ನಿಂದ ಕೊಹಿಮಾವರೆಗೆ ಇಡೀ ದೇಶದಲ್ಲಿ ಡಿಜಿಟಲ್ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಮೋದಿ ಹೇಳಿದರು.
  • ಭಾರತವು ಸೌರ ವಲಯದಲ್ಲಿ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡುತ್ತಿದೆ. ಇಂದು ಇಡೀ ವಿಶ್ವವೇ ಭಾರತದ ಸಾಧನೆಯನ್ನು ಕಂಡು ಬೆರಗಾಗಿದೆ,” ಎಂದು ಅವರು ಹೇಳಿದರು.
  • ಭಾರತೀಯ ಕೈಗಾರಿಕೆಗಳು ಮತ್ತು ಸ್ಟಾರ್ಟ್ ಅಪ್‌ಗಳು ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ತರುತ್ತಿವೆ ಎಂದು ಅವರು ಹೇಳಿದರು.
  • ಭಾರತವನ್ನು ಶಕ್ತಿಯುತವಾಗಿಸಲು ವಿದ್ಯಾರ್ಥಿ ಶಕ್ತಿಯೇ ಆಧಾರವಾಗಿದೆ. ಇಂದಿನ ಯುವಜನತೆ, ಮುಂಬರುವ ವರ್ಷಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.
  • ಪರಿಸರ ಸಂರಕ್ಷಣೆಯ ಬಗ್ಗೆಯೂ ಮಾತನಾಡಿದ ಮೋದಿಯವರು ಪರಿಸರದ ಬಗೆಗಿನ ಸೂಕ್ಷ್ಮತೆಯು ನಮ್ಮ ಸಮಾಜದ ಪ್ರತಿಯೊಂದು ಕಣದಲ್ಲೂ ಹುದುಗಿದೆ ಮತ್ತು ನಾವು ಅದನ್ನು ನಮ್ಮ ಸುತ್ತಲೂ ಅನುಭವಿಸಬಹುದು. ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಡುವವರಿಗೇನೂ ದೇಶದಲ್ಲಿ ಕೊರತೆಯಿಲ್ಲ. ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಮತ್ತು ಸಾಮೂಹಿಕ ಕ್ರಮವನ್ನು ಖಚಿತಪಡಿಸಿಕೊಳ್ಳಲು ಭಾರತ-ನೇತೃತ್ವದ ಜಾಗತಿಕ ಸಾಮೂಹಿಕ ಆಂದೋಲನವಾದ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅನ್ನು ಅಳವಡಿಸಿಕೊಳ್ಳುವಂತೆ ನಾಗರಿಕರಲ್ಲಿ ವಿನಂತಿಸಿದ್ದಾರೆ.
  • ಇದೇ ವೇಳೆ ಭಾರತದ ಬುಡಕಟ್ಟು ವೀರ ಬಿರ್ಸಾ ಮುಂಡಾ ಅವರ ಕೊಡುಗೆಗಳನ್ನು ಮೋದಿ ಸ್ಮರಿಸಿದ್ದಾರೆ.
  • ಸರ್ದಾರ್‌ ವಲ್ಲಭಭಾಯಿ ಪಟೇಲರ್‌ ಜನ್ಮದಿನದ ಕುರಿತು ಮಾತನಾಡಿ “ನಾಳೆ, ಅಕ್ಟೋಬರ್ 31, ರಾಷ್ಟ್ರೀಯ ಏಕತಾ ದಿನ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಶುಭ ಸಂದರ್ಭ. ಈ ದಿನದಂದು, ದೇಶದ ಮೂಲೆ ಮೂಲೆಗಳಲ್ಲಿ ಏಕತೆಯ ಓಟವನ್ನು ಆಯೋಜಿಸಲಾಗಿದೆ. ಈ ಓಟವು ದೇಶದಲ್ಲಿ ಏಕತೆಯ ಎಳೆಯನ್ನು ಬಲಪಡಿಸುತ್ತದೆ, ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ. ಈ ಓಟದಲ್ಲಿ ಪಾಲ್ಗಳ್ಳುವಂತೆ ವಿನಂತಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!