ನಿರ್ಮಾಣ ಹಂತದ ಸೇತುವೆಯಿಂದ ಉರುಳಿಬಿದ್ದ ಟ್ರಕ್‌: ಚಾಲಕ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಡಿಶಾದ ಮಯೂರ್‌ಭಂಜ್‌ನ ಬಾಂಬೆ ಚಾಕ್ ಬಳಿ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ವೇಗವಾಗಿ ವಾಹನವೊಂದು ಉರುಳಿಬಿದ್ದು ಟ್ರಕ್ ಚಾಲಕ ಸಾವನ್ನಪ್ಪಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಸೇತುವೆ ನಿರ್ಮಾಣ ಹಂತದಲ್ಲಿದ್ದರೂ ಯಾವುದೇ ತಡೆಗೋಡೆಗಳನ್ನಾಗಲೀ ಅಥವಾ ನಿಲುಗಡೆ ಫಲಕಗಳನ್ನಾಗಲೀ ಹಾಕಿರಲಿಲ್ಲ ಎನ್ನಲಾಗಿದೆ.

ವರದಿಗಳ ಪ್ರಕಾರ, ಅತಿವೇಗದಿಂದ ಬಂದ ಟ್ರಕ್ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನೋಂದಣಿ ಸಂಖ್ಯೆ OD 09K2360 ಹೊಂದಿರುವ ಟ್ರಕ್ ಕಿಯೋಂಜಾರ್‌ನಿಂದ ಕೋಲ್ಕತ್ತಾಗೆ ತೆರಳುತ್ತಿತ್ತು ಎನ್ನಲಾಗಿದೆ.

ಘಟನೆಯ ನಂತರ, ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 18 ಮತ್ತು 49 ಅನ್ನು ನಿರ್ಬಂಧಿಸಿದ್ದು ಸೇತುವೆಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿ ಅಧಿಕಾರಿಗಳು ಯಾವುದೇ ತಿರುವು ಸೂಚನೆ ಅಥವಾ ರಸ್ತೆ ಗುರುತು ಫಲಕ ಅಥವಾ ಬ್ಯಾರಿಕೇಡ್ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಗಲೇ ಕತ್ತಲಾಗಿದ್ದರಿಂದ ಅರೆಬರೆಯಾಗಿ ನಿಂತಿದ್ದ ಸೇತುವೆ ಹಾಗೂ ಪಕ್ಕದ ರಸ್ತೆ ಕಾಣದೆ ನೇರವಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!