ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕೊರಿಯಾ ಜಲಗಡಿಗೆ ಉತ್ತರ ಕೊರಿಯಾದ ಕ್ಷಿಪಣಿ ಬಂದು ಬಿದ್ದಿದ್ದು, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ಮಧ್ಯೆ ಯುದ್ಧಭೀತಿ ಎದುರಾಗಿದೆ.
ಅಮೆರಿಕದ ಜತೆ ಸೇರಿ ದಕ್ಷಿಣ ಕೊರಿಯಾ ವೈಮಾನಿಕ ತಾಲೀಮು ನಡೆಸುತ್ತಿದ್ದು, ಇದಕ್ಕೆ ವಿರುದ್ಧವಾಗಿ ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗ ಮಾಡಿದೆ. 25 ಕ್ಷಿಪಣಿಗಳನ್ನು ಉಡಾಯಿಸಿದ್ದು, ಅದರಲ್ಲಿ ಒಂದು ದಕ್ಷಿಣ ಕೊರಿಯಾದ ಜಲಗಡಿಗೆ ಬಂದು ಬಿದ್ದಿದೆ. ಎರಡು ರಾಷ್ಟ್ರಗಳ ನಡುವೆ ಮತ್ತೆ ಯುದ್ಧಭೀತಿ ಆರಂಭವಾಗಿದೆ.
ಉತ್ತರ ಕೊರಿಯಾದ ಈ ದಾಳಿಯಿಂದಾಗಿ ಕಡಲ ತೀರದ ಜನರಿಗೆ ಮಿಲಿಟರಿ ಬಂಕ್‌ಗಳಲ್ಲಿ ಆಶ್ರಯ ನೀಡಲಾಗಿದೆ.ಅಮೆರಿಕ ಜತೆ ಸೇರಿ ದಕ್ಷಿಣ ಕೊರಿಯಾ ವೈಮಾನಿಕ ಅಭ್ಯಾಸ ನಡೆಸುತ್ತಿರುವುದು ನಮ್ಮ ದೇಶದ ಮೇಲೆ ಮುಂದೆ ನಡೆಯುವ ದಾಳಿಯ ಸೂಚನೆ. ದಾಳಿ ನಡೆದಿದ್ದೇ ಆದರೆ ಅಣ್ವಸ್ತ್ರ ಪ್ರಯೋಗಕ್ಕೂ ಸಿದ್ಧ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.