ಜನಸೇನಾ ಮುಖ್ಯಸ್ಥನಿಗೆ ಪ್ರಾಣಹಾನಿ? ಪವನ್ ಮನೆ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆಂದು ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಹೈದರಾಬಾದ್‌ನಲ್ಲಿರುವ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮನೆ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ ಎಂದು ಪಕ್ಷದ ಮುಖಂಡರು ಆರೋಪಿಸುತ್ತಿದ್ದಾರೆ. ಪವನ್ ಕಲ್ಯಾಣ್ ಮನೆ ಬಳಿ ಅಪರಿಚಿತರು ಓಡಾಡುತ್ತಿದ್ದು, ಪವನ್ ವಾಹನಗಳನ್ನು ಹಿಂಬಾಲಿಸುತ್ತಿದ್ದಾರೆ ಎಂದು ಜನಸೇನಾ ಮುಖಂಡರು ಜುಬ್ಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಎರಡು ದಿನಗಳಿಂದ ಪವನ್ ಮನೆ ಬಳಿ ಅಪರಿಚಿತರು ಓಡಾಡುತ್ತಿದ್ದು, ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಪವನ್ ಅವರನ್ನು ಹಿಂಬಾಲಿಸುತ್ತಿದ್ದಾರೆಂದು ಪೊಲೀಸರ ಗಮನಕ್ಕೆ ತಂದರು. ತಮ್ಮ ಪಕ್ಷದ ನಾಯಕನಿಗೆ ಬೇರೆ ಪಕ್ಷದಿಂದ ಬೆದರಿಕೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿಶಾಖಾಪಟ್ಟಣಂ ಗಲಾಟೆ ನಂತರ, ಪವನ್ ಕಲ್ಯಾಣ್ ಅವರ ನಿವಾಸ ಮತ್ತು ಕಚೇರಿ ಬಳಿ ಹೊಸ ಮುಖಗಳು ಓಡಾಡುತ್ತಿದ್ದು, ನಮ್ಮ ಗಮನಕ್ಕೆ ಬಂದಿದೆ. ವೈಯಕ್ತಿಕ ಭದ್ರತಾ ಸಿಬ್ಬಂದಿ ಕೂಡ ಅವರು ಅಭಿಮಾನಿಗಳಲ್ಲ ಎಂಬುದನ್ನು ಸ್ಲಪಷ್ಟಪಡಿಸಿದರು.

ನಿನ್ನೆ ಕಾರಿನಲ್ಲಿ ಮತ್ತು ಇಂದು ಬೈಕ್‌ಗಳಲ್ಲಿ ಪವನ್ ಅವರ ವಾಹನವನ್ನು ಹಿಂಬಾಲಿಸಿದ್ದಾರೆ. ಮೊನ್ನೆ ಸೋಮವಾರ ಮಧ್ಯರಾತ್ರಿ ಮೂವರು ವ್ಯಕ್ತಿಗಳು ಬಂದು ಪವನ್ ಮನೆ ಬಳಿ ಜಗಳವಾಡಿದ್ದರು. ಭದ್ರತಾ ಸಿಬ್ಬಂದಿಯನ್ನು ಕೆರಳಿಸಲು ಯತ್ನಿಸಿದರು ಆದರೆ, ಸಿಬ್ಬಂದಿ ಸಂಯಮ ವಹಿಸಿ ಘಟನೆಯ ವಿಡಿಯೋ ತೆಗೆದಿದ್ದಾರೆ ಎಂದು ಜನಸೇನಾ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂದ್ಲ ಮನೋಹರ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!