ಹೊಟ್ಟೆ ಗುಡುಗುಡು, ಅತಿಸಾರಕ್ಕೆ ಇಲ್ಲಿದೆ ಮನೆ ಮದ್ದು..

ಹಿಂದಿನ ದಿನ ತಿಂದಿದ್ದು ಹೆಚ್ಚಾಗಿದೆ ಎನಿಸುತ್ತದೆ, ಬೆಳಗ್ಗೆ ಎದ್ದ ತಕ್ಷಣ ಲೂಸ್ ಮೋಷನ್, ಹೊಟ್ಟೆಯಲ್ಲಿ ಗುಳುಗುಳು.. ಮಕ್ಕಳು ಹೀಗೆ ಹೇಳೋದು ಸಾಮಾನ್ಯ. ದೇಹಕ್ಕೆ ಒಗ್ಗದ ಯಾವುದೋ ಆಹಾರದಿಂದ ಹೊಟ್ಟೆ ಕೆಟ್ಟು ಬೇಧಿ ಆಗಬಹುದು. ಅತಿಸಾರಕ್ಕೆ ಮನೆ ಮದ್ದು ಇಲ್ಲಿದೆ..

ನಿಂಬೆಹಣ್ಣಿನ ಜ್ಯೂಸ್, ಸಕ್ಕರೆ, ನಿಂಬು, ಉಪ್ಪು ಹಾಗೂ ನೀರು ಹಾಕಿ ಕುಡಿಸಿ

ಶುಂಠಿ ಚಹಾ, ನೀರಿಗೆ ಶುಂಠಿ, ಬೆಲ್ಲ ಹಾಕಿ ಕುದಿಸಿ ಕುಡಿಯಿರಿ

ಒಂದು ಕಪ್ ಮೊಸರಿಗೆ ಸಕ್ಕರೆ ಹಾಕಿ ತಿನ್ನಿ

ಪಚ್ಚಬಾಳೆಹಣ್ಣು ಸೇವಿಸಿ

ಕ್ಯಾಮೊಮೀಲ್ ಚಹಾ ಸೇವನೆಯಿಂದ ಅತಿಸಾರ ನಿಲ್ಲುತ್ತದೆ

ಬಿಸಿನೀರಿಗೆ ಜೀರಿಗೆ ಹಾಕಿ ಕುಡಿಯಿರಿ

ದಾಳಿಂಬೆ ಹಣ್ಣು ಅಥವಾ ಅದರ ಜ್ಯೂಸ್ ಸೇವನೆ ಮಾಡಿ

ಓಟ್ಸ್‌ನಲ್ಲಿ ಹೆಚ್ಚು ಫೈಬರ್ ಇದೆ, ಹಾಗಾಗಿ ಓಟ್ಸ್ ಸೇವನೆ ಉತ್ತಮ

ಬಾರದಂತೆ ಹೀಗೆ ತಡೆಗಟ್ಟಿ

ಶುಚಿಯಾದ ಆಹಾರಕ್ಕೆ ಆದ್ಯತೆ ನೀಡಿ
ಹೆಚ್ಚು ಫೈಬರ್ ನಿಮ್ಮ ಆಹಾರದಲ್ಲಿರಲಿ.
ಕಾಫಿ ಕಡಿಮೆ ಮಾಡಿ
ಸದಾ ನೀರು ಕುಡಿಯುತ್ತಿರಿ ದೇಹ ಆರೋಗ್ಯವಾಗಿರಲಿ
ನಿಮಗೆ ಅಲರ್ಜಿ ಆಗುವ ಆಹಾರದ ಮೇಲೆ ಗಮನ ಇರಲಿ.
ಶುಚಿಯಾಗಿಲ್ಲ ಎನಿಸಿದ ಆಹಾರ ಮುಟ್ಟಬೇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!