ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರ್ಭಿಣಿ ಪತ್ನಿಯನ್ನು ಬಂಡೆ ಬಳಿ ಕರೆದುಕೊಂಡು ಹೋಗಿ, ನಗಿಸಿ, ಸೆಲ್ಫಿ ತೆಗೆದುಕೊಂಡ ತಕ್ಷಣವೇ ಅಲ್ಲಿಂ ತಳ್ಳಿದ್ದ ಪತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಟರ್ಕಿಯ ಮುಗ್ಲಾದ ಬಟರ್ ಫ್ಲೈ ವ್ಯಾಲಿಯಲ್ಲಿ ಸೆಮ್ರಾ ಐಸಳ್‌ರನ್ನು ಸಾವಿರ ಅಡಿ ಎತ್ತರದ ಬಂಡೆಯಿಂದ ಆಕೆಯ ಪತಿ ಹಕನ್ ಐಸಲ್ ತಳ್ಳಿದ್ದ. ಏಳು ತಿಂಗಳ ಗರ್ಭಿಣಿ ಸೆಮ್ರಾ ಸ್ಥಳದಲ್ಲೇ ಮೃತಪಟ್ಟಿದ್ದು, ಐಸಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪತ್ನಿ ಸೆಮ್ರಾ ಸತ್ತರೆ ಜೀವ ವಿಮೆ ಹಣ ಬರುತ್ತದೆ ಎನ್ನುವ ಯೋಜನೆ ಹಕನ್ ಹಾಕಿದ್ದ. ಮುಂಚೆಯೇ ಯೋಜನೆ ಹಾಕಿ, ಗರ್ಭಿಣಿ ಪತ್ನಿಯನ್ನು ಅಷ್ಟು ಎತ್ತರದ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಎತ್ತರದ ಸ್ಥಳ ನೋಡಿ ಸೆಮ್ರಾ ಭಯಭೀತಳಾಗಿದ್ದಾಳೆ. ಆಕೆಯನ್ನು ಖುಷಿಪಡಿಸಲು, ಈ ದಿನವನ್ನು ನೆನೆಪಿನಲ್ಲಿಟ್ಟುಕೊಳ್ಳಲು ಹಕನ್ ಸೆಲ್ಫಿ ತೆಗೆದುಕೊಂಡಿದ್ದಾನೆ. ತಕ್ಷಣವೇ ಆಕೆಯನ್ನು ತಳ್ಳಿ ಕೊಂದಿದ್ದಾನೆ. ಕಾಲು ಜಾರಿ ಪತ್ನಿ ಬಿದ್ದಿದ್ದಾಳೆ ಎಂದು ಹೇಳಿ ವಿಮೆ ಹಣ ಪಡೆದಿದ್ದಾನೆ. ಘಟನೆ ತನಿಖೆ ವೇಲೆ ಹಕನ್ ನಿಜರೂಪ ಹೊರಬಂದಿದೆ. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ಜೀವಾವಧಿ ಶಿಕ್ಷೆ ನೀಡಿದೆ.