ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಬಿಗ್ ಹಿಟ್ ಸಿನಿಮಾ ಬ್ರಹ್ಮಾಸ್ತ್ರದ ಸೀಕ್ವೆಲ್‌ಗೆ ಪಾತ್ರಧಾರಿಗಳ ಆಯ್ಕೆ ನಡೆಯುತ್ತಿದೆ.
ಇಲ್ಲಿ ರಣ್‌ಬೀರ್ ನಟಿಸೋದಿಲ್ಲ, ರಣ್‌ಬೀರ್ ಬದಲು ಕನ್ನಡದ ನಟ ಯಶ್ ಅವರನ್ನು ಅಪ್ರೋಚ್ ಮಾಡಲಾಗಿತ್ತು ಎನ್ನುವ ಸುದ್ದಿ ಹೊರಬಿದ್ದಿತ್ತು. ತದನಂತರ ಯಶ್ ಪಾತ್ರವನ್ನು ರಿಜೆಕ್ಟ್ ಮಾಡಿದ್ದು, ವಿಜಯ್ ದೇವರಕೊಂಡಗೆ ಆಫರ್ ಹೋಗಿದೆ ಎನ್ನಲಾಗಿತ್ತು. ಆದರೆ ಯಾಕೋ ರಣ್‌ಬೀರ್ ಈ ಬಾರಿಯೂ ಪಾರ್ಟ್-2 ನಲ್ಲಿ ನಟಿಸಲಿದ್ದಾರೆ ಎನ್ನುವ ಸುಳಿವು ಕಾಣುತ್ತಿದೆ.
ಅಲ್ಲದೇ ರಣ್‌ಬೀರ್ ತಾಯಿ ಪಾತ್ರದಲ್ಲಿ ದೀಪಿಕಾ ಪಡುಕೋಣ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ರಣ್‌ಬೀರ್‌ನಷ್ಟೇ ವಯಸ್ಸು ಇರುವ ದೀಪಿಕಾ ತಾಯಿ ಪಾತ್ರಕ್ಕೆ ಒಪ್ಪಿದ್ದು ಯಾಕೆ, ಅವರು ಹೇಗೆ ಕಾಣಬಹುದು ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.