ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿದ ಧರ್ಮಪುರಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಯುವತಿಯರು ಪ್ರೀತಿಯಲ್ಲಿ ಬಿದ್ದಿದ್ದು, ಈ ವಿಷಯ ಪೋಷಕರಿಗೆ ತಿಳಿದಿದೆ. ಪೋಷಕರ ವಿರೋಧದ ನಡುವೆಯೂ ಪ್ರೀತಿಯಲ್ಲಿದ್ದ ಯುವತಿಯರು ಮನೆಯಲ್ಲಿ ಒಪ್ಪದ ಕಾರಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪ್ರಕರಣದ ವಿವರ
ಧರ್ಮಪುರಿಯ ಕಾಲೇಜೊಂದರ ವಿದ್ಯಾರ್ಥಿನಿಯರು ಪ್ರೀತಿಸುತ್ತಿದ್ದರು. ಮನೆಯವರಿಗೆ ಪ್ರೀತಿ ವಿಷಯ ತಿಳಿದು ದೂರಾಗುವಂತೆ ಸಲಹೆ ನೀಡಿದ್ದರು. ಆದರೆ ದೂರ ಇರಲು ಆಗದ ವಿದ್ಯಾರ್ಥಿನಿಯರು ಮನೆಯವರ ವಿರೋಧವಿದ್ದರೂ ಆಗಾಗ ಭೇಟಿ ಮಾಡುತ್ತಿದ್ದರು. ಮನೆಯವರ ಭಯಕ್ಕೆ ಇಬ್ಬರು ಓಡಿ ಹೋಗಿದ್ದಾರೆ. ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ಧರ್ಮಪುರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಇವರಿಬ್ಬರನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ. ನಂತರ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಬರುವುದರೊಳಗೆ ಆತ್ಮಹತ್ಯೆಗೆ ಯುವತಿಯೊಬ್ಬಳು ಯತ್ನಿಸಿದ್ದಾರೆ. ಠಾಣೆಯ ಶೌಚಾಲಯಕ್ಕೆ ತೆರಳಿ ಬ್ಲೇಡ್‌ನಲ್ಲಿ ಕೈ, ಹಾಗೂ ಕುತ್ತಿಗೆ ಕತ್ತರಿಸಿಕೊಂಡಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಯುವತಿಯರನ್ನು ತಮ್ಮ ಪೋಷಕರಿಗೆ ಒಪ್ಪಿಸಿದ್ದಾರೆ.