ಹೊಸದಿಗಂತ ವರದಿ,ಕಲಬುರಗಿ:
ವಿಶ್ವ ಹಿಂದು ಪರಿಷದ್,ಬಜರಂಗದಳ ವತಿಯಿಂದ ಹಮ್ಮಿಕೊಂಡಿರುವ ಹನುಮ ಮಾಲಾ ಅಭಿಯಾನ ನಿಮಿತ್ತ ನಗರದ ಕಲ್ಯಾಣ ಕಾಯಾ೯ಲಯದಲ್ಲಿ ಕಲಬುರಗಿ ವಿಭಾಗ ಮಟ್ಟದ ಪೂವ೯ಭಾವಿ ಸಭೆ ಜರುಗಿತು.
ಸಭೆಯಲ್ಲಿ ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತದ ಉಪಾಧ್ಯಕ್ಷರಾದ ಲಿಂಗರಾಜಪ್ಪಾ ಅಪ್ಪಾ ಮಾತನಾಡಿ, ಪ್ರವಾಸ ಮಾಡುವ ಸಂದರ್ಭದಲ್ಲಿ ಎಲ್ಲ ಮಾಲಾಧಾರಿಗಳು ಜಾಗೃತೆಯಿಂದ ಇರಬೇಕೆಂದು ಮಾಹಿತಿ ನೀಡಿದರು.
ಈ ಪೂವ೯ಭಾವಿ ಸಭೆಯಲ್ಲಿ ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯಿಂದ ಸುಮಾರು 150ಕ್ಕೂ ಅಧಿಕ ಕಾಯ೯ಕತ೯ರು ಭಾಗವಹಿಸಿದ್ದರು.
ವಿ.ಎಚ್.ಪಿ.ವಿಭಾಗದ ಕಾಯ೯ದಶಿ೯ ಶಿವರಾಜ್ ಸಂಗೋಳಗಿ ಹನುಮಾನ ಮಾಲಾ ಹಾಕಿಕೊಳ್ಳುವ ಉದ್ದೇಶ ಹಾಗೂ ವಿಧಾನದ ಬಗ್ಗೆ ಸುವಿಸ್ತಾರವಾಗಿ ವಿವರಿಸಿದರು.
ಸಭೆಯಲ್ಲಿ ಸಹ ಕಾಯ೯ದಶಿ೯ ಅಂಬರೀಶ್ ಸುಲೇಗಾಂವ್,ಬಜರಂಗದಳ ವಿಭಾಗದ ಸಂಯೋಜಕ ಬಸವರಾಜ ಸೂಗುರ ಸೇರಿದಂತೆ ಅನೇಕ ಜಿಲ್ಲಾ ಸ್ಥರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲ್ಯಾಣ ಕಾಯಾ೯ಲಯದಲ್ಲಿ ಕನಕದಾಸರ ಜಯಂತಿ ಸಹ ಆಚರಿಸಲಾಯಿತು.