ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನಸೇನಾ ನಾಯಕ ಪವನ್ ಕಲ್ಯಾಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಶುಕ್ರವಾರ ಇಪ್ಪಟಂ ಗ್ರಾಮಕ್ಕೆ ತೆರಳುವ ವೇಲೆ ಕಾರಿನ ಮೇಲೆ ಕುಳಿತು ಪ್ರಯಾಣಸಿದ್ದರ ಕುರಿತು ತಾಡೆಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ ಐಆರ್ ನಂ.817/2022 ಐಪಿಸಿ ಸೆಕ್ಷನ್ 336, 279, ರೆಡ್ ವಿತ್ 177 ಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮಕ್ಕೆ ಹೋಗುವಾಗ ಪವನ್ ಕಾರಿನ ಮೇಲೆ ಕೂರಿಸಿಕೊಂಡು ವಾಹನ ಚಲಾಯಿಸಿದ ಚಾಲಕನ ವಿರುದ್ಧ ಕೂಡ ಪ್ರಕರಣ ದಾಖಲಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆತನ ಬೆಂಗಾವಲು ಪಡೆಯನ್ನು ಹಿಂಬಾಲಿಸಿದ ಹಲವು ವಾಹನಗಳ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಹಾಗೂ ಆತನ ಚಾಲಕನ ವಿರುದ್ಧ ತೆನಾಲಿ ಮಾರಿಸ್ ಪೇಟೆಯ ಪಿ.ಶಿವಕುಮಾರ್ ಎಂಬವರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ. ಪೊಲೀಸರು ಇತರರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಐಪಿಸಿ ಸೆಕ್ಷನ್ 336 ರ ಅಡಿಯಲ್ಲಿ ಮತ್ತು ರಸ್ತೆಯಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿದಕ್ಕಾಗಿ ಐಪಿಸಿ ಸೆಕ್ಷನ್ 279 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!