ತೆಲಂಗಾಣ ಜನತೆಗೆ ಮಾತು ಕೊಡುತ್ತಿದ್ದೇನೆ, ಭ್ರಷ್ಟರನ್ನು ಬಿಡುವುದಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ಮೋದಿ ಆಂಧ್ರಪ್ರದೇಶ ಪ್ರವಾಸ ಮುಗಿಸಿ ತೆಲಂಗಾಣಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಬೇಗಂಪೇಟೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿ, ಟಿಆರ್‌ಎಸ್ ಸರ್ಕಾರವನ್ನು ಟೀಕಿಸಿದರು. ಇದೇ ವೇಳೆ ತೆಲಂಗಾಣ ಜನತೆಗೆ ಒಂದು ಮಾತು ನೀಡುತ್ತೇನೆ ಭ್ರಷ್ಟಾಚಾರಕ್ಕೆ ಒಳಗಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.

ಮುನುಗೋಡು ಉಪಚುನಾವಣೆ ಬಗ್ಗೆ ಮಾತನಾಡಿದ ಪ್ರಧಾನಿ, ಅಧಿಕಾರಕ್ಕೆ ಬಂದವರು ತೆಲಂಗಾಣದ ಭಾವನೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಆದರೆ, ತೆಲಂಗಾಣದ ಜನತೆ ಮಾತ್ರ ಹಿಂದೆ ಸರಿಯುತ್ತಿದ್ದಾರೆ ಎಂದು ಟಿಆರ್‌ಎಸ್ ಸರಕಾರವನ್ನು ಟೀಕಿಸಿದರು. ತೆಲಂಗಾಣವನ್ನು ಕೌಟುಂಬಿಕ ಆಡಳಿತದಿಂದ ಮುಕ್ತಗೊಳಿಸಲು ನಾನೂ ಕೂಡ ನಿಮ್ಮಂತೆ ಸಾಮಾನ್ಯ ಕಾರ್ಯಕರ್ತ, ಬಿಜೆಪಿ ಕಾರ್ಯಕರ್ತರು ಇಂತಹ ಹೋರಾಟಕ್ಕೆ ಮುಂದಾಗಬೇಕು ಎಂದು ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದರು.

ತೆಲಂಗಾಣದಲ್ಲಿ ಎರಡ್ಮೂರು ಸ್ಥಾನಗಳಲ್ಲ, ಬಿಜೆಪಿಗೆ ಎಲ್ಲಾ ಸ್ಥಾನಗಳನ್ನು ಪಡೆಯಲು ಕಾರ್ಯಕರ್ತರು ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ. ತೆಲಂಗಾಣದಲ್ಲಿ ಬಿಜೆಪಿ ಸಂಪೂರ್ಣ ಜಯಭೇರಿ ಬಾರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ತೆಲಂಗಾಣ ಸರ್ಕಾರ ಮೂಢನಂಬಿಕೆಯಲ್ಲಿ ಮುಳುಗಿದೆ ಎಂದು ಟೀಕಿಸಿದರು. ಭ್ರಷ್ಟರೆಲ್ಲ ಒಂದಾಗಲು ಪ್ರಯತ್ನಿಸುತ್ತಿದ್ದಾರೆ. ದರೋಡೆ ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ. ತನಿಖೆಯಿಂದ ಹೊರಬರಲು ಕೆಲವರು ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಸಾಮಾನ್ಯ ಜನರ ಸೇವೆಗೆ ರಾಜಕೀಯವೊಂದೇ ದಾರಿ. ರಾಜಕೀಯದಲ್ಲಿ ಸೇವಾ ಮನೋಭಾವನೆ ಇರಬೇಕು. ಆದರೆ ಇಲ್ಲಿ ಅಧಿಕಾರದಲ್ಲಿರುವವರು ಮೋದಿ ಹಾಗೂ ಬಿಜೆಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮೋದಿ ದ್ವೇಷಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅವರಿಗೆ ನನ್ನನ್ನು ಬೈಯುವುದನ್ನು ಬಿಟ್ಟು ಬೇರೇನೂ ಇಲ್ಲ. ಸಂಜೆ ಟೀ ಸವಿಯುತ್ತಾ ಆ ಎಲ್ಲಾ ಟೀಕೆಗಳನ್ನು ಎಂಜಾಯ್‌ ಮಾಡಿ ಎಂದು ನಗೆ ಚಟಾಕಿ ಹಾರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!