ಚೀನಾದಲ್ಲಿ ಕೋವಿಡ್ ಹೊಸ ಅಲೆ, ಮತ್ತೆ ಲಾಕ್‌ಡೌನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ಜಗತ್ತಿಗೇ ಕೊರೋನಾ ಹಬ್ಬಿಸಿದ ಖ್ಯಾತಿಯ ಚೀನಾದಲ್ಲಿ ಇದೀಗ ಮತ್ತೆ ಕೊರೋನಾ ಭೀತಿ ಎದುರಾಗಿದೆ. ಕೊರೋನಾ ಹೊಸ ಅಲೆ ಅಪ್ಪಳಿಸಿದ್ದು, ಚೀನಾದ ಅನೇಕ ನಗರಗಳಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಹೆಚ್ಚಿನ ಮಂದಿಗೆ ಯಾವುದೇ ಲಕ್ಷಣಗಳು ಇರಲಿಲ್ಲೆ ಎನ್ನಲಾಗಿದೆ.

ಚಾಂಗ್‌ಕ್ವಿಂಗ್, ಗುವಾಂಗ್‌ಝೌ ನಗರಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಬೀಜಿಂಗ್‌ನಲ್ಲಿ ಪ್ರತಿದಿನ 21 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಅನೇಕ ನಗರಗಳಲ್ಲಿ ಶಾಲೆಗಳು ಮುಚ್ಚಿದ್ದು, ಆನ್‌ಲೈನ್ ತರಗತಿ ಆರಂಭವಾಗಿದೆ.

ಈಗಾಗಲೇ ಕೊರೋನಾದಿಂದ ಆರ್ಥಿಕ ಹಿಂಜರಿತ ಅನುಭವಿಸಿರುವ ಚೀನಾಗೆ ಗಾಯದ ಮೇಲೆ ಬರೆ ಎನ್ನುವಂತೆ ಮತ್ತೆ ಕೋವಿಡ್ ವಕ್ಕರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!