ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಹೀರೋ ವಿಶಾಲ್ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಹೊರಗೂ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡಿ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ವಿಶಾಲ್ ಯಾವಾಗಲೂ ರೈತರು, ವಿದ್ಯಾರ್ಥಿಗಳು ಮತ್ತು ಅನಾಥರ ಕುರಿತು ಕೆಲವು ರೀತಿಯ ಸೇವೆಯನ್ನು ಮಾಡುತ್ತಾರೆ. ವಿಶಾಲ್ ಅವರಂತೆಯೇ ವಿಶಾಲ್ ಅಭಿಮಾನಿಗಳು ಕೂಡ ವಿಶಾಲ್ ಮಕ್ಕಳ್ ನಲ ಇಯಕ್ಕಂ (ವಿಶಾಲ್ ಪಬ್ಲಿಕ್ ವೆಲ್ಫೇರ್ ಅಸೋಸಿಯೇಷನ್) ಸ್ಥಾಪಿಸಿ ಆ ಸಂಘದ ವತಿಯಿಂದ ತಮಿಳುನಾಡು ರಾಜ್ಯದಾದ್ಯಂತ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ವಿಶಾಲ್ ಅಭಿಮಾನಿಗಳು ಮಾಡುವ ಈ ಕಾರ್ಯಕ್ರಮಗಳಿಗೆ ವಿಶಾಲ್ ಕೂಡ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ವಿಶಾಲ್ ಅಭಿಮಾನಿಗಳು 11 ಬಡ ಜೋಡಿಗಳಿಗೆ ಮದುವೆ ಮಾಡಿದ್ದರು. ತಾಳಿ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಉಚಿತವಾಗಿ ನೀಡಿ ವಿವಾಹ ಕಾರ್ಯಕ್ರಮ ನೆರಬೇರಿಸಿದರು. ವಿಶಾಲ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ದಂಪತಿಗೆ ಹಾರೈಸಿ, ಇಂತಹ ಪುಣ್ಯ ಕಾರ್ಯ ಮಾಡಿದ ತಮ್ಮ ಅಭಿಮಾನಿಗಳನ್ನು ಹೊಗಳಿದರು.
ಜೊತೆಗೆ ತಮ್ಮ ಹೆಸರಿನಲ್ಲಿ ರಾಜ್ಯಾದ್ಯಂತ ಇಂತಹ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ ವಿಶಾಲ್, ಇಂತಹ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ತಮ್ಮ ನೆಚ್ಚಿನ ಸಂಘಗಳ ಅನೇಕ ಸದಸ್ಯರಿಗೆ ಚಿನ್ನದ ಸರ ಹಾಗೂ ಚಿನ್ನದ ಉಂಗುರಗಳನ್ನು ನೀಡಿದರು. ವಿಶಾಲ್ ತನ್ನ ಕೈಯಿಂದ ಆ ಚಿನ್ನದ ಸರಗಳನ್ನು ತನ್ನ ಅಭಿಮಾನಿಗಳಿಗೆ ಹಾಕಿದರು. ವಿಶಾಲ್ ಅವರ ಈ ಕಾರ್ಯಕ್ಕೆ ಅಭಿಮಾನಿಗಳ ಜೊತೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.