ಮಾಂತ್ರಿಕನ ಜೊತೆಗೆ ಪ್ರೀತಿಯಲ್ಲಿ ಬಿದ್ದು ರಾಜಮನೆತನ ತೊರೆದ ನಾರ್ವೆ ಯುವರಾಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಾರ್ವೆ ದೇಶದ ರಾಜಕುಮಾರಿ ಮಾರ್ಥಾ ಲೂಯಿಸ್ ಅಮೆರಿಕಾ ಮೂಲದ ಮಂತ್ರವಾದಿ, ಲೇಖಕ ಹಾಗೂ ಉದ್ಯಮಿಯಾದ ಡ್ಯುರೆಕ್ ವೆರೆಟ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ತನ್ನ ರಾಜಮನೆತನದ ಕರ್ತವ್ಯಗಳನ್ನು ತ್ಯಜಿಸಿ ವೆರೆಟ್‌ ಅವರೊಂದಿಗೆ ವಿವಾಹವಾಗಲು ಸಿದ್ಧರಾಗಿದ್ದಾರೆ.
ನಾರ್ವೆ ಕಿಂಗ್ ಹೆರಾಲ್ಡ್ ಮತ್ತು ರಾಣಿ ಸೋಂಜಾ ಅವರ ಪುತ್ರಿ ರಾಜಕುಮಾರಿ ಮಾರ್ಥಾ (51)  ಅಮೇರಿಕನ್‌ ಸೆಲೆಬ್ರಿಟಿ ಡ್ಯುರೆಕ್ ವೆರೆಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಜಮನೆತನಕ್ಕೆ ಹೊರತಾದ ಅನ್ಯ ವ್ಯಕ್ತಿಯನ್ನು ವಿವಾಹವಾಗುತ್ತಿರುವುದರಿಂದ ಮಾರ್ಥಾ ರಾಯಲ್ ಹೌಸ್ ಆಫ್ ನಾರ್ವೆಯೊಂದಿಗಿನ ಸಂಬಂಧಗಳನ್ನು ತ್ಯಜಿಸಬೇಕಿದೆ. ಈ ಬಗ್ಗೆ ಬೇಸರವಿಲ್ಲ. ಡ್ಯೂರೆಕ್‌ ಪ್ರೀತಿಯಲ್ಲಿ ನಾನು ಸುಖಿಸುತ್ತಿದ್ದೇನೆ ಎಂದು ಮಾರ್ಥಾ ಇನ್ಸ್ಟಾಗ್ರಾಂ ವೀಡಿಯೊದಲ್ಲಿ ಹರ್ಷಚಿತ್ತದಿಂದ ಹೇಳಿದ್ದಾರೆ.

ಮಂತ್ರವಾದಿಯಾಗಿ ಸಾಕಷ್ಟು ಖ್ಯಾತಿಗಳಿಸಿರುವ ಡ್ಯುರೆಕ್‌ ಅಷ್ಟೇ ಪ್ರಮಾಣದ ಕುಖ್ಯಾತಿಯನ್ನೂ ಹೊಂದಿದ್ದಾರೆ. ತಾನು ಮಾತ್ರಿಸಿಕೊಟ್ಟ ತಾಯಿತವನ್ನು ಬಳಸಿದರೆ  ಕರೋನಾ ವೈರಸ್ ಸೋಂಕು ತಲುಗುವುದಿಲ್ಲ ಎಂದು ಜನರನ್ನು ನಂಬಿಸಲು ಯತ್ನಿಸಿ ಡ್ಯೂರೆಕ್‌ ಟೀಕೆಗೆ ಒಳಗಾಗಿದ್ದರು. ಮಾರ್ತಾ ಲೂಯಿಸ್ ಕೂಡ ಅತಿಮಾನುಷ ಶಕ್ತಿಗಳಲ್ಲಿ ಅಪಾರ ನಂಬಿಕೆ ಹೊಂದಿದವರಾಗಿದ್ದಾರೆ. ಡ್ಯುರೆಕ್‌ ಜೊತೆಗೆ ಸೇರಿ ಕ್ಯಾನ್ಸರ್‌ ಮತ್ತಿತರೆ ಮಾರಕ ಕಾಯಿಲೆಗಳಿಗೆ ಔಷಧ ಕಂಡುಹಿಡಿಯುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!