ಡಿಸೆಂಬರ್ 3ನೇ ವಾರದಲ್ಲಿ ಕನಕೋತ್ಸವ : ಎಂಎಲ್‌ಸಿ ರವಿ

ಹೊಸದಿಗಂತ ವರದಿ ರಾಮನಗರ :

ಪ್ರತಿ ವರ್ಷದಂತೆ ಈ ಬಾರಿಯೂ ಕನಕೋತ್ಸವವನ್ನು ಡಿಸೆಂಬರ್ ಅಂತ್ಯದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿಕನಕೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದೆ. ಕಳೆದ ಎರಡು
ವರ್ಷಗಳಿಂದ ಕನಕೋತ್ಸವ ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು
ಹೇಳಿದರು.

ಆರಂಭದ ದಿನಗಳಲ್ಲಿ ಕನಕಪುರ ತಾಲೂಕಿಗೆ ಸೀಮಿತವಾಗಿದ್ದಕನಕೋತ್ಸವವನ್ನು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ವಿಸ್ತರಿಸಿ ಕಾರ್ಯಕ್ರಮವಾಗಿ ಆಯೋಜಿಸಲ್ಪಡುತ್ತಿದೆ. ಈ ಬಾರಿಯಕನಕೋತ್ಸವ-2022 ಕನಕಪುರದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಅಂಗವಾಗಿ ನವೆಂಬರ್ ಮತ್ತು ಡಿಸೆಂಬರ್ ಮೊದಲ ವಾರದಲ್ಲಿ ರಾಮನಗರ ಜಿಲ್ಲೆಯಾದ್ಯಂತ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಹಲವು ಸ್ಪರ್ಧೆಗಳು ನಡೆಯಲಿವೆ ಎಂದು
ಹೇಳಿದರು. ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಹಾಗೂ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಕ್ರೀಡಾಕೂಟಗಳು ನಡೆಯಲಿವೆ.

ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿ ಆಯೋಜನೆ ಆಗುತ್ತಿರುವುದರಿಂದ ಆಯಾ ತಾಲೂಕಿನ ಕಾಂಗ್ರೆಸ್ನಾಯಕರು ಕೈ ಜೋಡಿಸಲಿದ್ದಾರೆ. ಜತೆಗೆ, ಕೋವಿಡ್ ಸಮಯದಲ್ಲಿ ಜನತೆ ಸಹಾಯ ಮಾಡಿದ ಪ್ರತಿಯೊಬ್ಬರಿಗೆ ಸನ್ಮಾನ ಮಾಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗುರುತಿಸಿ ಸನ್ಮಾನಿಸಲಾಗುತ್ತಿದೆ. ಕೋವಿಡ್ ಕಾಲಘಟ್ಟದಲ್ಲಿ ಆಹಾರ ಕಿಟ್ ವಿತರಣೆ, ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ , ಅಂಬ್ಯುಲೆನ್ಸ್ ಕೊಡುಗೆ ಹಾಗೂ ಐತಿಹಾಸಿಕ ಮೇಕೆದಾಟು ಪಾದಯಾತ್ರೆಯ ಯಶಸ್ಸಿಗೆ ಸಹಕರಿಸಿದವರನ್ನು ಇದೇ ವೇದಿಯಲ್ಲಿ ಅಭಿನಂದಿಸಲಾಗುವುದು ಎಂದು ಹೇಳಿದರು.

ವಾಯ್ಸ್ ಆಫ್ ಕನಕೋತ್ಸವ-2022(ಗಾಯನ ಸ್ಪರ್ಧೆ) ಚಲನಚಿತ್ರಗೀತೆಗೆ ಸಮೂಹ ನೃತ, ಜನಪದಗೀತೆ, ರಂಗಗೀತೆಗಳ ಸ್ಪರ್ಧೆ ಜರುಗಿದರೆ, ಕ್ರೀಡಾ ಕೂಟಗಳ ಪೈಕಿ ವಾಲಿಬಾಲ್, ಕಬ್ಬಡ್ಡಿ, ಥ್ರೋಬಾಲ್ ಷಟಲ್ ಬ್ಯಾಡ್ಮಿಂಟನ್, ಟೆನ್ನಿಸ್, ಕುಸ್ತಿ ಪಂದ್ಯಾವಳಿಗಳು ಜರುಗಲಿದೆ ಎಂದು ಹೇಳಿದರು.
ಇನ್ನು ಕನಕಪುರ ತಾಲೂಕು ವ್ಯಾಪ್ತಿಯಲ್ಲಿಯು ಹಲವು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದ್ದು, ರಂಗೋಲಿ
ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಮಾರಥಾನ್ ಸ್ಪರ್ಧೆ, ಮಹಿಳೆಯರ ಕೇಶವಿನ್ಯಾಸ ಸ್ಪರ್ಧೆ, ದಂಪತಿಗಳಿಗೆ ಸಾಂಪ್ರಾದಾಯಕ ಉಡುಗೆ ಸ್ಪರ್ಧೆ, ರಾಸುಗಳ ಸ್ಪರ್ಧೆ, ಜಾನಪದ
ಕಲಾಮೇಳ ಸ್ಪರ್ಧೆ ಜರುಗಲಿದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತದೆ. ಜತೆಗೆ, ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ಹಾಗೂ ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಹೋಬಳಿ, ತಾಲ್ಲೂಕು, ಮತ್ತು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ನಿಯಮಗಳು, ಸ್ಪರ್ಧೆ ನಡೆಯುವ ಸ್ಥಳ, ಮತ್ತು ದಿನಾಂಕವನ್ನು ಕರಪತ್ರಗಳ ಮೂಲಕ ಪ್ರಚಾರ ಮಾಡಲಾಗುತ್ತದೆ ಎಂದು ಹೇಳಿದರು. ರಾಮೋತ್ಸವ ಆಚರಣೆ: ಕನಕಪುರದಲ್ಲಿ ಕನಕೋತ್ಸವ ಆಚರಣೆ ಮಾಡಿದ್ದಂತೆ ಶೀಘ್ರದಲ್ಲಿಯೇ ರಾಮನಗರದಲ್ಲಿಯೂ ರಾಮೋತ್ಸವ ಆಚರಣೆ ಮಾಡಲಾಗುತ್ತದೆ
ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮಖಂಡ ಇಕ್ಬಾಲ್ ಹುಸೇನ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!