ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿಗಳ ಬಸ್ ಪಾಸ್ ಕುರಿತು ಸಂಜೆ 7.30 ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಬಿಎಂಟಿಸಿ ಸೂಚನೆ ನೀಡಿದೆ.
ಈ ಮೊದಲು ವಿದ್ಯಾರ್ಥಿಗಳು ಸಂಜೆ 7.30 ರ ಬಳಿಕ ಬಿಎಂಟಿಸಿ ಬಸ್ನಲ್ಲಿ ಸಂಚರಿಸುವ ಹಾಗಿಲ್ಲ ಎಂಬ ಸೂಚನೆ ಸಾಕಷ್ಟು ತೊಂದರೆಯಾಗುತ್ತಿತ್ತು.ಹೀಗಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ಸಲ್ಲಿಸಿದ್ದರು.
ಇದೀಗ ವಿದ್ಯಾರ್ಥಿಗಳ ಮನವಿ ಮೇರೆಗೆ ಸಂಜೆ 7.30 ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಬಿಎಂಟಿಸಿ ಸೂಚೆನೆ ನೀಡಿದೆ.
ವಿದ್ಯಾರ್ಥಿಗಳ ದೂರನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಬಿಎಂಟಿಸಿ ಪಾಸ್ ಉಪಯೋಗಿಸಿಕೊಂಡು ಯಾವ ಸಮಯದಲ್ಲಿ ಬೇಕಾದರೂ ಪ್ರಯಾಣಿಸಬಹುದು. ಪಾಸ್ ಇರುವ ವಿದ್ಯಾರ್ಥಿಗಳ ಬಳಿ ನಿರ್ವಾಹಕರು ಟಿಕೆಟ್ ತೆಗೆದುಕೊಳ್ಳುವಂತಿಲ್ಲ ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ.