2022ರಲ್ಲಿ ದ್ವಿಗುಣಗೊಂಡಿದೆ ಪಾಕಿಸ್ಥಾನದ ಡ್ರೋನ್‌ ದಾಳಿ: ಬಿಎಸ್‌ಎಫ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚಿನ ದಿನಗಳಲ್ಲಿ ಗಡಿಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್‌ ಗಳು ಹೆಚ್ಚಾಗುತ್ತಿದ್ದು 2022ರಲ್ಲಿ ಡ್ರೋನ್‌ ದಾಳಿಗಳು ದ್ವಿಗುಣಗೊಂಡಿದೆ ಎಂದು ಬಿಎಸ್‌ಎಫ್‌ ಮಹಾನಿರ್ದೇಶಕ ಹೇಳಿದ್ದಾರೆ. ಇವುಗಳನ್ನು ಮುಖ್ಯವಾಗಿ ಡ್ರಗ್ಸ್ ಮತ್ತು ಮದ್ದುಗುಂಡುಗಳನ್ನು ಸಾಗಿಸಲು ಬಳಸಲಾಗುತ್ತದೆ.

“ಬಿಎಸ್ಎಫ್ ಸ್ವಲ್ಪ ಸಮಯದಿಂದ ಡ್ರೋನ್ ಬೆದರಿಕೆಯಲ್ಲಿ ಹೆಚ್ಚಳವನ್ನು ಗಮನಿಸುತ್ತಿದೆ. ಡ್ರೋನ್‌ನ ಬಹುಮುಖತೆಯು ಬಹಳ ಪ್ರಸಿದ್ಧವಾಗಿದೆ, ಅದರ ಅನಾಮಧೇಯತೆಯ ಕಾರಣದಿಂದಾಗಿ ಡ್ರೋನ್‌ನ ಗಳನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದು ದೇಶದ ಗಡಿ ಭಾಗದಲ್ಲಿ ಭಾರೀ ತೊಂದರೆಯುಂಟು ಮಾಡುತ್ತಿದೆ” ಎಂದು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ಈ ಸಮಸ್ಯೆಯು ತುಂಬಾ ತೀವ್ರವಾಗಿದೆ ಮತ್ತು ಇದು ನಮಗೆ ವಿಚಾರಣೆಯ ಮೂಲಕ ತಿಳಿದಿದೆ, ಇದನ್ನು ತಡೆಯಲು ನಮ್ಮ ಡ್ರೋನ್ ತಂಡಗಳನ್ನು ನಿಯೋಜಿಸಿದಾಗ, ಹೆಚ್ಚಿನ ಗಸ್ತು ಅಥವಾ ಡ್ರೋನ್ ವಿರೋಧಿ ಉಪಕರಣಗಳನ್ನು ಸ್ಥಾಪಿಸಿದರೆ, ಅಪರಾಧಿಗಳು ಅಕ್ರಮ ಚಟುವಟಿಕೆಯನ್ನು ಕೈಗೊಳ್ಳಲು ಇತರ ಭಾಗಗಳಿಗೆ ಹೋಗುತ್ತಾರೆ ” ಎಂದು ಡಿಜಿ ಹೇಳಿದ್ದಾರೆ.

ಆದಾಗ್ಯೂ ಬಿಎಸ್‌ಎಫ್ ಡ್ರೋನ್ ಫೋರೆನ್ಸಿಕ್ಸ್ ಅಧ್ಯಯನಕ್ಕಾಗಿ ದೆಹಲಿಯ ಶಿಬಿರದಲ್ಲಿ ಅತ್ಯಾಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಿದೆ. ಭದ್ರತಾ ಏಜೆನ್ಸಿಗಳು ವಿಮಾನ ಮಾರ್ಗವನ್ನು ಮತ್ತು ಅಕ್ರಮ ಗಡಿಯಾಚೆಗಿನ ಚಟುವಟಿಕೆಯಲ್ಲಿ ತೊಡಗಿರುವ ಅಪರಾಧಿಗಳ ವಿಳಾಸಗಳನ್ನು ಟ್ರ್ಯಾಕ್ ಮಾಡಬಹುದಾದ ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದಾರೆ.

ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನಾದ್ಯಂತ ಹಾದುಹೋಗುವ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯ 3,000 ಕಿ.ಮೀ.ಗೂ ಹೆಚ್ಚು ಕಾವಲು ಕಾಯುವ ಬಿಎಸ್‌ಎಫ್, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ಮೊದಲು ಡ್ರೋನ್ ರಿಪೇರಿ ಲ್ಯಾಬ್ ಅನ್ನು ಸ್ಥಾಪಿಸಿತು ಮತ್ತು ನಂತರ ಅಕ್ಟೋಬರ್‌ನಲ್ಲಿ ಫೋರೆನ್ಸಿಕ್ಸ್ ಅನ್ನು ವಿಶ್ಲೇಷಿಸಲು ಅದನ್ನು ವಿಸ್ತರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!