ಬರ್ತಡೇ ಆಚರಣೆ ವೇಳೆ ಜಾರಿ ಬಿದ್ದ ಮ್ಯಾಕ್ಸ್‌ ವೆಲ್: ಕಾಲು ಮುರಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆ ಆಸ್ಟ್ರೇಲಿಯಾ ಆಲ್‌ ರೌಂಡರ್ ಗ್ಲೆನ್ ಮ್ಯಾಕ್ಸ್‌ ವೆಲ್ ಜಾರಿಬಿದ್ದು, ಕಾಲು ಮುರಿದುಕೊಂಡಿದ್ದಾರೆ.

ಹೀಗಾಗಿ ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮುಂದಿನ ವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ODI ಸರಣಿಯಿಂದ ಅವರು ಹೊರಗುಳಿದಿದ್ದಾರೆ.

ಮ್ಯಾಕ್ಸ್‌ ವೆಲ್ ಉತ್ತಮ ಉತ್ಸಾಹದಲ್ಲಿದ್ದಾರೆ, ಆದರೆ, ಇದೇ ವೇಳೆ ದುರದೃಷ್ಟಕರ ಘಟನೆ ನಡೆದಿದೆ. ಅವರ ಚೇತರಿಕೆಗೆ ಹಾರೈಸುತ್ತೇವೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!