April 26, 2026
Sunday, April 26, 2026
spot_img

FOOD | ರೆಸ್ಟೋರೆಂಟ್ ಸ್ಟೈಲ್ ಗಾರ್ಲಿಕ್ ಮಶ್ರೂಮ್ ರೆಸಿಪಿ! ನೀವೂ ಟ್ರೈ ಮಾಡಿ

ಸರಳವಾಗಿ ಸಿಗುವ ಮಶ್ರೂಮ್ ಮತ್ತು ಬೆಳ್ಳುಳ್ಳಿಯಿಂದ ಮಾಡಬಹುದಾದ ಗಾರ್ಲಿಕ್ ಮಶ್ರೂಮ್ ಒಂದು ಆರೋಗ್ಯಕರ ಹಾಗೂ ಇನ್‌ಸ್ಟಂಟ್ ಸೈಡ್ ಡಿಶ್ ಅಂತಾನೆ ಹೇಳಬಹುದು. ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ರೋಟಿ, ನಾನ್, ಫ್ರೈಡ್ ರೈಸ್ ಅಥವಾ ಅನ್ನದ ಜೊತೆಗೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ.

ಬೇಕಾಗುವ ಪದಾರ್ಥಗಳು

ಮಶ್ರೂಮ್ – 2 ಕಪ್
ಬೆಳ್ಳುಳ್ಳಿ – 10–12 ಕಳಸು
ಬೆಣ್ಣೆ ಅಥವಾ ಎಣ್ಣೆ – 2 ಟೇಬಲ್ ಸ್ಪೂನ್
ಹಸಿರು ಮೆಣಸು – 1
ಈರುಳ್ಳಿ – 1 ಸಣ್ಣದು
ಕಾಳು ಮೆಣಸು ಪುಡಿ – ½ ಟೀ ಸ್ಪೂನ್
ಸೋಯಾ ಸಾಸ್ – 1 ಟೀ ಸ್ಪೂನ್ (ಐಚ್ಛಿಕ)
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ತಯಾರಿಸುವ ವಿಧಾನ

ಒಂದು ಬಾಣಲೆಗೆ ಬೆಣ್ಣೆ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸು ಹಾಕಿ ಸ್ವಲ್ಪ ಹುರಿಯಿರಿ. ನಂತರ ಈರುಳ್ಳಿ ಹಾಕಿ ಸಾಫ್ಟ್ ಆಗುವವರೆಗೆ ಬಿಡಿ. ಈಗ ಮಶ್ರೂಮ್ ಹಾಕಿ ಮಧ್ಯಮ ಉರಿಯಲ್ಲಿ 5–7 ನಿಮಿಷ ಹುರಿಯಿರಿ. ಮಶ್ರೂಮ್‌ನಿಂದ ಹೊರಬಂದು ಮತ್ತೆ ಒಣಗುವವರೆಗೆ ಬೇಯಲಿ.

ನಂತರ ಉಪ್ಪು, ಕಾಳು ಮೆಣಸು ಪುಡಿ ಹಾಗೂ ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇನ್ನೊಂದು 2 ನಿಮಿಷ ಹುರಿಯಿರಿ. ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !