ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಿಫಾ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು, ಎರಡು ದಿನಗಳ ನಂತರ ಕತಾರ್’ನಲ್ಲಿ ಫುಟ್ಬಾಲ್ ಉತ್ಸವ ಆರಂಭವಾಗಲಿದೆ.
ಇದರ ಉದ್ಘಾಟನಾ ಸಮಾರಂಭಕ್ಕೆ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಭಾರತವನ್ನ ಪ್ರತಿನಿಧಿಸಲಿದ್ದಾರೆ. ಈ ಹಿನ್ನೆಲೆ ನವೆಂಬರ್ 20 ಮತ್ತು 21ರಂದು ಎರಡು ದಿನಗಳ ಕತಾರ್’ಗೆ ತೆರಳಲಿದ್ದಾರೆ.
ಒಂದು ತಿಂಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಸುಮಾರು 32 ತಂಡಗಳು ಭಾಗವಹಿಸಲಿವೆ. ಇದೇ ಮೊದಲ ಬಾರಿಗೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ವಿಶ್ವಕಪ್ ನಡೆಯಲಿದೆ. ಇಲ್ಲಿಯವರೆಗೆ, ವಿಶ್ವಕಪ್ ಜೂನ್-ಜುಲೈನಲ್ಲಿ ನಡೆಯುತ್ತಿತ್ತು. ಪಂದ್ಯಾವಳಿಯ ಪಂದ್ಯಗಳು ಎಂಟು ಮೈದಾನಗಳಲ್ಲಿ ನಡೆಯಲಿವೆ. 80,000 ಸಾಮರ್ಥ್ಯದ ಲುಸೈಲ್ ಕ್ರೀಡಾಂಗಣದಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಇದು ಮಧ್ಯಪ್ರಾಚ್ಯದಲ್ಲಿ ನಡೆಯಲಿರುವ ಮೊದಲ ವಿಶ್ವಕಪ್ ಆಗಿದೆ.