SHOCKING NEWS | ಕರ್ತವ್ಯದಲ್ಲಿದ್ದ ವೇಳೆ ಹಿಮಕುಸಿತ: ಮೂವರು ಯೋಧರು ಹುತಾತ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್ ಪ್ರದೇಶದಲ್ಲಿ ಹಿಮಕುಸಿತ ಸಂಭಸಿದ್ದು, ಮೂವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಯ 56 RR ನ ಮೂವರು ಸೈನಿಕರು ಮಚ್ಚಿಲ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವೇಳೆ ಹಿಮಕುಸಿತವಾಗಿದ್ದು, ಮೂವರು ಹುತಾತ್ಮರಾಗಿದ್ದಾರೆ.

ಮೃತ ಯೋದರ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತಿಳಿದು ಬಂದಿದೆ.

ಲೈನ್ ಆಫ್ ಕಂಟ್ರೋಲ್ (LoC) ಗಿಂತ 1-2 ಕಿಮೀ ಮೊದಲು ಮುನ್ನ ಹೋಗುತ್ತಿರುವ 12 ಜಾವಾದ ಲಿಂಕ್ ಪೆಟ್ರೋಲ್‌ನಲ್ಲಿ ಹಿಮಪಾತವು ಅಪ್ಪಳಿಸಿತು. ವರದಿಗಳ ಪ್ರಕಾರ, ಶುಕ್ರವಾರ ಬೆಳಗಿನ ಜಾವ 2.30ಕ್ಕೆ 2 ಹಿಮಕುಸಿತಗಳು ಸಂಭವಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!