Wednesday, November 30, 2022

Latest Posts

ಅಮೃತಯಾತ್ರೆ: ಭಾರತದ ಕಾಫಿಯ ಘಮ ಜಗತ್ತಿಗೆ ತಲುಪಿದ ಬಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಭಾರತದ ಸಾಧನೆಗಳ ಪಟ್ಟಿ ಬಹಳ ಉದ್ದವಿದೆ. ಅವುಗಳಲ್ಲೊಂದು ಭಾರತದ ಕಾಫಿಯ ಘಮಲು ಜಗತ್ತಿಗೆ ತಲುಪಿಸುವಲ್ಲಿ ಸಫಲವಾಗಿದ್ದು. ಭಾರತದಲ್ಲಿ ಉತ್ಪಾದನೆಯಾಗುವ ಕಾಫಿ ಬೀಜಗಳು ಇಂದು ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿವೆ.

1960-61 ರಲ್ಲಿ ಭಾರತವು 19.7 ಸಾವಿರ ಟನ್‌ ಗಳಷ್ಟು ಕಾಫಿಯನ್ನು ಜಗತ್ತಿಗೆ ರಫ್ತು ಮಾಡಿದೆ. ಇವುಗಳ ಮೌಲ್ಯ ಸುಮಾರು 7 ಕೋಟಿ ರೂ. ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆಗೆ ಈ ರಫ್ತು 12 ಪಟ್ಟು ಹೆಚ್ಚಾಗಿದೆ. 2020-21 ನೇಯ ಇಸವಿಯಲ್ಲಿ 5,340 ಕೋಟಿ ರೂ. ಮೌಲ್ಯದ 245 ಸಾವಿರ ಟನ್ ಗಳಷ್ಟು ಕಾಫಿಯನ್ನು ಜಗತ್ತಿಗೆ ರವಾನಿಸಲಾಗಿದೆ.

ವರ್ಲ್ಡ್‌ ಎಕನಾಮಿಕ್‌ ಫೋರಂ 2020ರಲ್ಲಿ ತಿಳಿಸಿದಂತೆ ಭಾರತವು ಕಾಫಿ ಉತ್ಪಾದನೆಯಲ್ಲಿ ಜಾಗತಿಕವಾಗಿ 7ನೇ ಸ್ಥಾನದಲ್ಲಿದೆ. 2021-22ರಲ್ಲಿ ಕಾಫಿ ರಫ್ತಿನ ಮೌಲ್ಯವು 1 ಬಿಲಿಯನ್‌ ಡಾಲರ್‌ ಗಳನ್ನು ದಾಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!