2047ಕ್ಕೆ 40 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಲಿದೆ ಭಾರತ: ಮುಖೇಶ್ ಅಂಬಾನಿ ವಿಶ್ವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2047ರ ವೇಳೆಗೆ ಭಾರತವು ತನ್ನ ಪ್ರಸ್ತುತ ಗಾತ್ರಕ್ಕಿಂತ 13 ಪಟ್ಟು ಜಿಗಿದು 40 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ಭಾರತದ ಬಿಲಯನೇರ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಹೇಳಿದ್ದಾರೆ. ಭಾರತವು ಪ್ರಾಥಮಿಕವಾಗಿ ಶುದ್ಧ ಇಂಧನ ಕ್ರಾಂತಿ ಮತ್ತು ಡಿಜಿಟಲೀ ಕರಣಗಳಿಂದ ಭಾರತ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

“ಜಾಗತಿಕ ಆರ್ಥಿಕತೆಗಳಲ್ಲಿ ಪ್ರಸ್ತುತ US, ಚೀನಾ, ಜಪಾನ್ ಮತ್ತು ಜರ್ಮನಿಯ ಹಿಂದೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿಭಾರತವಿದೆ. 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ, ಭಾರತವು 2047 ರ ವೇಳೆಗೆ 40 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯುತ್ತದೆ, ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಸ್ಥಾನ ಪಡೆಯುತ್ತದೆ” ಎಂದು ಪಂಡಿತ್ ದೀನದಯಾಳ್ ಎನರ್ಜಿ ವಿಶ್ವವಿದ್ಯಾಲಯದ 10 ನೇ ಘಟಿಕೋತ್ಸವದಲ್ಲಿ ಅಂಬಾನಿ ಹೇಳಿದ್ದಾರೆ.

2047ರ ಸಮಯದಲ್ಲಿ ಭಾರತವು 100 ವರ್ಷಗಲ ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳಲಿದೆ. ಈ ಅಮೃತಕಾಲ ತೆರೆದುಕೊಳ್ಳುವ ಹೊತ್ತಿಗೆ ದೇಶವು ಆರ್ಥಿಕ ಬೆಳವಣಿಗೆ ಮತ್ತು ಅವಕಾಶ ಸೃಷ್ಟಿಯಲ್ಲಿ ಅಭೂತಪೂರ್ವ ಬೆಳಣಿಗೆ ಸಾಧಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಶುದ್ಧ ಇಂಧನ ಕ್ರಾಂತಿ, ಜೈವಿಕ ಕ್ರಾಂತಿ ಮತ್ತು ಡಿಜಿಟಲ್‌ ಕ್ರಾಂತಿ, ಇವು ಮೂರು ಆಟ ಬದಲಾಯಿಸುವ ಕ್ರಾಂತಿಗಳಾಗಿದ್ದು ಮುಂದಿನ ದಶಕಗಳಲ್ಲಿ ಭಾರತದ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ” ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!