ಹಿಮದಡಿ ಹುದುಗಿದ್ದ 48,500 ವರ್ಷ ಹಳೆಯ ‘ಜೋಂಬಿ ವೈರಸ್’ಗೆ ಮರುಜೀವ; ವಿಶ್ವಕ್ಕೆ ಮತ್ತೊಂದು ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜಾಗತಿಕ ತಾಪಮಾನ ಏರಿಕೆಯಿಂದ ಜಗತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಿಮನದಿಗಳ ಕರಗುವಿಕೆ, ಸಮುದ್ರದ ಉಬ್ಬರ ಹೆಚ್ಚಳ, ಬಿರುಗಾಳಿ, ಭೂಕಂಪ, ಅತಿವೃಷ್ಟಿ.. ಹೀಗೆ ತಾಪಮಾನ ಏರಿಕೆಯು ಭೂಮಿಯನ್ನು ಹಂತ ಹಂತವಾಗಿ ವಿನಾಶದತ್ತ ಕೊಂಡೊಯ್ಯುತ್ತಿದೆ. ಧ್ರುವ ಪ್ರದೇಶ, ಸಮುದ್ರ, ಭೂಮಿ ಸೇರಿದಂತೆ ಎಲ್ಲಾ ರೀತಿಯ ಪರಿಸರಗಳನ್ನೂ ಜಾಗತಿಕ ತಾಪಮಾನ ಏರಿಕೆ ಹಾಳುಗೆಡವುತ್ತಿದೆ. ಮನುಷ್ಯನ ವಿಲಾಸಿ ಜೀವನಕ್ಕೆ ಇಡೀ ಪರಿಸರ ವ್ಯವಸ್ಥೆ ಬಲಿಯಾಗುತ್ತಿದೆ. ಜೊತೆಗೆ ಹಲವಾರು ವಿಕ್ಷಿಪ್ತ ಘಟನೆಗಳಿಗೂ ಕಾರಣವಾಗುತ್ತಿದೆ. ವಾತಾವರಣದ ತಾಪಮಾನ ಏರಿಕೆಯಿಂದಾಗಿ ಇದೀಗ ಜಗತ್ತು ಮತ್ತೊಂದು ಮಾರಣಾಂತಿಕ  ಸಾಂಕ್ರಾಮಿಕ ವೈರಸ್‌ ದಾಳಿಗೆ ತುತ್ತಾಗುವ ಸುಳಿವು ಸಿಕ್ಕಿದೆ.
ತಾಪಮಾನ ಏರಿಕೆಯಿಂದಾಗಿ ಹಿಮಪ್ರದೇಶಗಳು ವೇಗವಾಗಿ ಕರಗುತ್ತಿವೆ. ಈ ಹಿಮಗೆಡ್ಡೆಗಲ ಅಡಿ ಹುದುಗಿದ್ದ ಅತ್ಯಂತ ಪ್ರಾಚೀನ ವೈರಸ್‌ ಗಳು ಈಗ ಭೂಮಿಯ ಮೇಲ್ಬಾಗಕ್ಕೆ ಬರುತ್ತಿವೆ. ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ  ಇದೀಗ 48,500 ವರ್ಷಗಳಷ್ಟು ಹಳೆಯದಾದ ʼಜೋಂಬಿ ವೈರಸ್‌ ಗೆ ಮರು ಜನ್ಮ ಸಿಕ್ಕಿದೆ.
ಪಂಡೋರಾವೈರಸ್ ಯೆಡೋಮಾ ಎಂದು ಕರೆಯಲ್ಪಡುವ ಈ ಅತ್ಯಂತ ಹಳೆಯ ವೈರಸ್‌ ಅನ್ನು ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್‌ನ ಯುರೋಪಿಯನ್ ಸಂಶೋಧಕರ ತಂಡವು ಪತ್ತೆಹಚ್ಚಿದೆ. ಇದು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೆಪ್ಪುಗಟ್ಟಿತ್ತು. ಆದರೆ ಅಚ್ಚರಿಯೆಂದರೆ,  ಹೆಪ್ಪುಗಟ್ಟಿದ ನೆಲದಲ್ಲಿ ಸಿಕ್ಕಿಬಿದ್ದ ಅನೇಕ ಸಹಸ್ರಮಾನಗಳನ್ನು ಕಳೆದರೂ ಅವು ಸಾಂಕ್ರಾಮಿಕವಾಗಿ ಉಳಿದಿವೆ. ಇವು ಮಾನವ ಕುಲಕ್ಕೆ ದೊಡ್ಡ ಅಪಾಯವನ್ನುಂಟು ಮಾಡಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.  ಇಂತಹಸುಮಾರು ಎರಡು ಡಜನ್ ವೈರಸ್‌ಗಳನ್ನು ಸಂಶೋಧಕರು ಪತ್ತೆಮಾಡಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ಬದಲಾವಣೆಯು ಪ್ರಾಚೀನ ಪರ್ಮಾಫ್ರಾಸ್ಟ್  (ಮಂಜುಗಡ್ಡೆಯ ಮೇಲಿನ ಪದರ) ಅನ್ನು ತ್ವರಿತವಾಗಿ ಕರಗಿಸುತ್ತಿದೆ, ಈ ಪರ್ಮಾಫ್ರಾಸ್ಟ್ನಿ ನ ಅಡಿ ಹುದುಗಿರುವ  ಪ್ರಾಚೀನ ರೋಗದ ಮಾದರಿಗಳು ಅಪರಿಚಿತ ವೈರಸ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಜೊಂಬಿ ವೈರಸ್‌ಗಳು ಒಮ್ಮೆ ವಾತಾವರಣ ಪ್ರವೇಶಿಸಿದರೆ ಮನುಷ್ಯ ಹಾಗೂ ಪ್ರಾಣಿಗಳಿಗೂ ತಗುಲುವಂತಹದ್ದಾಗಿದೆ. ಇವು ಜಗತ್ತಿನಲ್ಲಿ ಹೆಚ್ಚು ಸಮಸ್ಯೆ ಉಂಟುಮಾಡಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!