Monday, January 30, 2023

Latest Posts

ಕೂದಲು ಸೇವಿಸುವ ವಿಚಿತ್ರ ಕಾಯಿಲೆ: ಇದುವರೆಗೂ ಬರೋಬ್ಬರಿ 3 ಕೆಜಿ ಕೂದಲು ತಿಂದ ಬಾಲಕಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪ್ರಪಂಚದಾದ್ಯಂತ ಅನೇಕ ಜನರು ವಿಚಿತ್ರವಾದ ಅಭ್ಯಾಸಗಳನ್ನು ಹೊಂದಿದ್ದಾರೆ. ಅದರ ಭಾಗವಾಗಿಯೇ ಚೀನಾದ 14ರ ಹರೆಯದ ಬಾಲಕಿಗೂ ವಿಚಿತ್ರ ಅಭ್ಯಾಸವಿದೆ. ಶಾಂಕ್ಸಿ ಪ್ರಾಂತ್ಯದ ಪಿಕಾ ಎಂಬ ಯುವತಿಗೆ ನಡೆದ ವಿಚಿತ್ರ ಘಟನೆ ಇದು. ಅಂದರೆ, ತನ್ನ ಕೂದಲನ್ನು ತಾನೇ ಸೇವಿಸುವುದು. ಹೀಗೆ ತಿನ್ನುತ್ತಾ 3ಕಿಲೋ ಕೂದಲು ತನ್ನ ಹೊಟ್ಟೆಯಲ್ಲಿದೆ. ಪ್ರಸ್ತುತ ಆಕೆಯ ತಲೆ ಬೋಳಾಗಿದೆ ಎಂದು ಚೀನಾದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಸುದ್ದಿ ಸಂಸ್ಥೆ ತಿಳಿಸಿದೆ.

ಈ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಹೊಟ್ಟೆಯಲ್ಲಿ ಕೂದಲು ಶೇಖರಣೆಯಾಗಿ ಯುವತಿ ಕನಿಷ್ಠ ಆಹಾರ ತಿನ್ನಲು ಕೂಡಾ ಸಾಧ್ಯವಾಗಲಿಲ್ಲ. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆಕೆಯ ಹೊಟ್ಟೆಯಲ್ಲಿ ಸಂಗ್ರಹವಾದ ಮೂರು ಕೆಜಿ ಕೂದಲು ಉಂಡೆಯನ್ನು ತೆಗೆದುಹಾಕಿದ್ದಾರೆ.

ತಂದೆ-ತಾಯಿಯ ಕೆಲಸದಿಂದಾಗಿ ಬಾಲಕಿ ಅಜ್ಜ-ಅಜ್ಜಿಯ ಬಳಿ ಬೆಳೆದಳು. ಆದರೆ ಯುವತಿಯ ಚಟ ಅವರ ಗಮನಕ್ಕೆ ಬಂದಿಲ್ಲ. ಈ ಕಾಯಿಲೆ ಚಿಕ್ಕ ವಯಸ್ಸಿನಿಂದ ಇದ್ದು, ಕಾಲಾನಂತರದಲ್ಲಿ ದೊಡ್ಡದಾಗಿ ಬೆಳೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!