ಬಿಜೆಪಿ ಅಭ್ಯರ್ಥಿಗೆ ಹಲ್ಲೆ: ಗುಜರಾತ್ ಮತದಾನ ವೇಳೆ ಆತಂಕಹುಟ್ಟಿಸಿದ ವಿದ್ಯಮಾನ

ಹೊಸದಿಗಂತ ಡಿಜಿಟಲ್:

ಗುಜರಾತ್ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಹಂತದ ಮತದಾನ ಚುರುಕಾಗಿ ನಡೆಯುತ್ತಿರುವ ನಡುವೆಯೇ ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಅಪರಿಚಿತರ ಗುಂಪೊಂದು ಹಲ್ಲೆ ನಡೆಸಿ ಆತಂಕ ಸೃಷ್ಟಿಸಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ವನ್ಸ್ಡಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯುಷ್ ಪಟೇಲ್ ಹಲ್ಲೆಗೊಳಗಾದವರು. ಘಟನೆಯಲ್ಲಿ ಗಾಯಗೊಂಡಿರುವ ಇವರನ್ನು ಚಿಕಿತ್ಸೆಗೊಳಪಡಿಸಲಾಗಿದೆ.

ವನ್ಸ್ಡಾದ ಝಾರಿ ಗ್ರಾಮದಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅವರ ವಾಹನಕ್ಕೂ ಹಾನಿಯುಂಟುಮಾಡಿದ್ದಾರೆ. ಘಟನೆಗೆ ಸಂಬಂಽಸಿ ಪಿಯುಷ್ ಬೆಂಬಲಿಗರು ವನ್ಸ್ಡಾ ಪೊಲೀಸ್ ಠಾಣೆ ಮುಂಭಾಗ ತೆರಳಿ ಘೋಷಣೆ ಕೂಗಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!