ಮದುಮಗ ಮಂಟಪದಲ್ಲಿ ಮುತ್ತು ನೀಡಿದ ಎಂದು ಮದುವೆಯನ್ನೇ ರದ್ದು ಮಾಡಿದ ಮದುಮಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಮಂಟಪದಲ್ಲಿ ‘ಗಂಡ’ ಮತ್ತು ನೀಡಿದ ಎಂಬ ಸಿಟ್ಟಲ್ಲಿ ‘ವಧು’ ಮದುವೆಯನ್ನೇ ರದ್ದು ಮಾಡಿದ ವಿಲಕ್ಷಣ ಘಟನೆ ಉತ್ತರಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ.

ಇಷ್ಟಕ್ಕೂ ಆಗಿದ್ದೇನು ಅಂತ ಕೇಳಿದ್ರೆ ಇಲ್ಲಿದೆ ನೋಡಿ ವರದಿ ಓದಿ…

ಉತ್ತರಪ್ರದೇಶದ ಸಂಭಾಲ್‌ನಲ್ಲಿ ಈ ಮದುವೆ ನಡೆಯುತ್ತಿತ್ತು, ವಧು ಮತ್ತು ವರ ಪರಸ್ಪರ ಹಾರ ಬದಲಾಯಿಸಿಕೊಂಡೂ ಆಗಿತ್ತು. ಈ ವೇಳೆ ವರ ತನ್ನ ವಧುವಿಗೆ ಮುತ್ತು ನೀಡಿದ್ದಾನೆ. ಅತಿಥಿಗಳ ಮುಂಭಾಗದಲ್ಲಿ ಮುತ್ತು ನೀಡಿದ್ದಕ್ಕೆ ಕೆಂಡಾಮಂಡಲವಾದ ವಧು ಕೂಡಲೇ ಮಂಟಪದಿಂದ ಹೊರ ನಡೆದು ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಬಂದು ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದು ಮನವೊಲಿಸಲು ಯತ್ನಿಸಿದ್ದರಾದರೂ, ವಧು ಮದುವೆಗೆ ಸುತಾರಾಂ ಒಪ್ಪಲಿಲ್ಲ.

ವರ ಸ್ನೇಹಿತರ ಪ್ರಚೋದನೆಯಿಂದ ಆ ರೀತಿ ಮಾಡಿದ್ದು, ಮಗಳ ಮನವೊಲಿಕೆಗೆ ಪ್ರಯತ್ನಿಸಿದ್ದೇನೆ. ಆದರೆ ಆಕೆ ಮದುವೆಗೆ ಒಪ್ಪುತ್ತಿಲ್ಲ. ಇನ್ನೂ ಒಂದೆರಡು ದಿನಗಳಲ್ಲಿ ಮಾತುಕತೆ ಮೂಲಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಆಕೆಯ ತಾಯಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!