ಹೊಸದಿಗಂತ ಡಿಜಿಟಲ್ ಡೆಸ್ಕ್
ಸೆನೆಗಲ್ ದೇಶದ ಸಂಸತ್ತಿನಲ್ಲಿನಡೆಯುತ್ತಿದ್ದ ಬಜೆಟ್ ಅಧಿವೇಶನದಲ್ಲಿ ಸಂಸದರ ನಡುವೆ ಮಾರಾಮಾರಿ ನಡೆದಿದ್ದು, ಪುರುಷ ಸಂಸದನೊಬ್ಬ ಮಹಿಳಾ ಸಂಸದೆ ಹಾಗೂ ಆಡಳಿತ ಪಕ್ಷದ ಸದಸ್ಯೆ ಬೆನ್ನೋ ಬೊಕ್ ಯಾಕಾರ್ ಗೆ ಕಪಾಳಮೋಕ್ಷ ಮಾಡಿದ್ದಾರೆ.
ವಿರೋಧ ಪಕ್ಷದ ಸಂಸದ ಮಸ್ಸಾತಾ ಸಾಂಬ್ ಅವರು ಆಮಿ ಎನ್ಡಿಯಾಯೆ ಗ್ನಿಬಿ ಅವರ ಮಾತಿಗೆ ಕೋಪಗೊಂಡು ಆಕೆಯತ್ತ ತೆರಳಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ವೀಡಿಯೊ ಕ್ಲಿಪ್ ತೋರಿಸಿದೆ. ಘಟನೆಯ ನಂತರ ಶಾಸಕರ ನಡುವೆ ಹೊಡೆದಾಟ ನಡೆದಿದೆ. ಗ್ನಿಬಿ ಎಡವಿ ಬೀಳುವ ಮೊದಲು ಸಾಂಬ್ಗೆ ಕುರ್ಚಿಯಿಂದ ಹೊಡೆದಿದ್ದು ಕಂಡುಬಂದಿದೆ. ಶಾಸಕರು ಇಬ್ಬರನ್ನೂ ಹೋರಾಟದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಶಾಸಕರು ಮಾತಿನ ಚಕಮಕಿ ನಡೆಸಿದ್ದರಿಂದ ಅಧಿವೇಶನವನ್ನು ಸ್ಥಗಿತಗೊಳಿಸಲಾಯಿತು.
❗*Chaos in Senegal Parliament after MP Slaps Female Colleague*
The brawl began when opposition member Massata Samb walked over and slapped Amy Ndiaye Gniby – an MP of the ruling coalition – during a budget presentation, TV footage showed. pic.twitter.com/9Y074xSVTS
— Daniel Marven (@danielmarven) December 2, 2022