ವಿಷಕಾರಿ ಬೀಜ ತಿಂದ ನಾಲ್ವರು ಮಕ್ಕಳು: ಮೂವರು ಸಾವು, ಮತ್ತೊಬ್ಬರ ಸ್ಥಿತಿ ಚಿಂತಾಜನಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳು ಕಣ್ಣಿಗೆ ಕಂಡ ಯಾವುದೋ ಗಿಡದಿಂದ ಬೀಜಗಳನ್ನು ಕಿತ್ತು ತಿಂದು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ಕು ಮಕ್ಕಳು ವಿಷಪೂರಿತ ಬೀಜಗಳನ್ನು ಸೇವಿಸಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆ ಇತ್ತೀಚೆಗೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಬುಗ್ಗವಾಲಾ ಪ್ರದೇಶದಲ್ಲಿ ನಡೆದಿದೆ.

ಕಳೆದ ಬುಧವಾರ ಸಂಜೆ ಶಬ್ನಮ್ (5), ಶಾಜಿಯಾ (5), ಬಸೀರ್ ಮತ್ತು ಆಸಿಫಾ ತಮ್ಮ ಮನೆ ಸಮೀಪದ ತೋಟದಲ್ಲಿ ಆಟವಾಡುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಪನ್ವಾರ್ ಎಂಬ ವಿಷಕಾರಿ ಸಸ್ಯವನ್ನು ಕಂಡು ಇದು ದ್ವಿದಳ ಧಾನ್ಯದಂತಹ ಬೀಜಗಳನ್ನು ಹೊಂದಿದೆ. ಅವು ಕೂಡ ವಿಷಕಾರಿ. ಆದರೆ, ಅದು ತಿಳಿಯದ ಮಕ್ಕಳು ಕಿತ್ತು ತಿಂದು ಮನೆ ಕಡೆ ಹೋಗಿದ್ದಾರೆ. ಸ್ವಲ್ಪ ಸಮಯದಲ್ಲಿ ಮಕ್ಕಳಿಗೆ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತು. ಕೂಡಲೇ ಪೋಷರು ಆತಂಕಗೊಂಡು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಬನಂ ಗುರುವಾರ ಮೃತಪಟ್ಟಿದ್ದಾರೆ.

ಮರುದಿನ ಶಾಜಿಯಾ ಸಾವನ್ನಪ್ಪಿದ್ದು, ಭಾನುವಾರ ಬಸೀರ್ ಪ್ರಾಣ ಕಳೆದುಕೊಂಡಿದ್ದಾಳೆ. ಸದ್ಯ ಆಸಿಫಾ ಡೆಹ್ರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆಸಿಫಾ ಸ್ಥಿತಿ ಚಿಂತಾಜನಕವಾಗಿದೆ. ಇದೇ ವೇಳೆ ಇಷ್ಟೊಂದು ಮಕ್ಕಳು ಸಾವನ್ನಪ್ಪಿದ್ದರೂ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ ಎಂದು ಮಕ್ಕಳ ಪೋಷಕರು ಆರೋಪಿಸುತ್ತಿದ್ದಾರೆ. ಈ ವಿಷಯ ತಿಳಿದ ಜಿಲ್ಲಾ ಎಸ್ಪಿ ಅವರು ಆ ಪ್ರದೇಶದಲ್ಲಿದ್ದ ಪನ್ವಾರ್ ಗಿಡಗಳನ್ನು ನಾಶಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!