ಗೋಧ್ರಾ ಹತ್ಯಾಕಾಂಡ ಪ್ರಕರಣ: ಅಪರಾಧಿ ಫಾರೂಕ್‌ಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗೋಧ್ರಾ ಹತ್ಯಾಕಾಂಡ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಫಾರೂಕ್‌ಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

2018 ರಿಂದ ಸುಪ್ರೀಂ ಕೋರ್ಟ್‌ನಲ್ಲಿ ತನಗೆ ವಿಧಿಸಿದ ಜೀವಾವಧಿ ಶಿಕ್ಷೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಬಾಕಿ ಉಳಿದಿತ್ತು.
ಸರ್ಕಾರದ ಪರ ವಾದ ಮಂಡಿಸಿದ ಎಸ್‌ಜಿ, ವಿಷಯವು ಅಂತಿಮ ವಿಚಾರಣೆಗೆ ಸಿದ್ಧವಾಗಿದೆ. ಈಗ ಕಾಲಮಿತಿಯ ವಿಚಾರಣೆಗೂ ವಿಶೇಷ ಪೀಠಗಳಿವೆ. ಇದನ್ನು ಸಹ ಪಟ್ಟಿ ಮಾಡಬಹುದು. ಇದಕ್ಕೆ ಉತ್ತರಿಸಿದ ಸಿಜೆಐ ಚಂದ್ರಚೂಡ್‌, ನಿಮ್ಮ ಜೂನಿಯರ್‌ಗಳಿಗೆ ಹೇಳಿಕೆ ಸಿದ್ಧಪಡಿಸಲು ಹೇಳಿ ಮತ್ತು ಅದನ್ನು ರಿಜಿಸ್ಟ್ರಾರ್ ಪುನೀತ್ ಸೆಹಗಲ್ ಅವರಿಗೆ ಕಳುಹಿಸಲು ಹೇಳಿ. ನಾನು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇನೆ ಎಂದರು.

ಇತ್ತ ಫಾರೂಕ್‌ ಕಳೆದ 17 ವರ್ಷಗಳಿಮದ ಫಾರೂಕ್‌ ಜೈಲಿನಲ್ಲಿದ್ದಾನೆ. ಆ ಕಾರಣಕ್ಕಾಗಿ ಇವರಿಗೆ ಜಾಮೀನು ನೀಡಬೇಕು ಎಂದು ವಾದ ಮಾಡಲಾಗಿದೆ. ಆದರೆ, ಈ ಜಾಮೀನನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಇದು ದೇಶದ ಅತ್ಯಂತ ಘೋರ ಅಪರಾಧಗಳಲ್ಲಿ ಒಂದು. ಜನರನ್ನು ಬೋಗಿಗಳಲ್ಲಿ ಬಂಧಿಸಿ ಅವರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಸಾಮಾನ್ಯ ಸಂದರ್ಭಗಳಲ್ಲಿ ಕಲ್ಲು ತೂರಾಟವು ಕಡಿಮೆ ಗಂಭೀರ ಅಪರಾಧವಾಗಬಹುದು, ಆದರೆ ಇದು ವಿಭಿನ್ನ ಪ್ರಕರಣ ಎಂದು ಹೇಳಿದರು.

ಎಸ್‌ಜಿ ವಿಚಾರಣೆಯನ್ನು ಜನವರಿಗೆ ಮುಂದೂಡಲು ಕೇಳಿದ್ದರು. ಸರ್ಕಾರ ಎರಡನೇ ಬಾರಿಗೆ ಮುಂದೂಡಿಕೆಯನ್ನು ಬಯಸುತ್ತಿರುವುದರಿಂದ ಚಳಿಗಾಲದ ರಜೆಯ ಮೊದಲು ಅದನ್ನು ಆಲಿಸುವಂತೆ ಫಾರೂಕ್ ಅವರ ವಕೀಲರು ಪೀಠವನ್ನು ಕೇಳಿದರು. ಸಾಲಿಸಿಟರ್ ಜನರಲ್ ಕೂಡ, ‘ಜಾಮೀನು ಅರ್ಜಿಗಳ ವಿಚಾರಣೆ ಇತ್ಯರ್ಥ ಮಾಡಿದರೆ ಎಲ್ಲವೂ ಸರಿಯಾಗುತ್ತದ’ ಎಂದು ಹೇಳಿದ್ದರು. ಇದರಿಂದಾಗಿ ಪೀಠ ಜಾಮೀನು ಅರ್ಜಿಗಳನ್ನು ಪರಿಗಣಿಸುವುದಾಗಿ ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!