ಬಾಡಿಗೆ ನೀಡಲು ಹೋದಾಗ ಆತ ಮಂಚಕ್ಕೆ ಕರೆದ: ಜೀವನದ ಕಹಿನೋವು ಬಿಚ್ಚಿಟ್ಟ ನಟಿ ತೇಜಸ್ವಿನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿನಿಮಾದಲ್ಲಿ ಸಾಧನೆ ಕೆಲವರು ಮಾಡಿದರೆ, ಇನ್ನು ಕೆಲವರು ನಾನಾ ಅವಮಾನಗಳಿಂದ ಹೊರಬಂದಿದ್ದಾರೆ. ಅದ್ರಲ್ಲೂ ಕೆಲವರು ಕಾಸ್ಟಿಂಗ್ ಕೌಚ್ ಅನುಭವಿಸಿದ್ದರೂ ಮೌನವಾಗಿರುತ್ತಾರೆ ಇನ್ನೂ ಕೆಲವರು ಮೀಟೂ ಚಳುವಳಿ ಮೂಲಕ ತಮ್ಮ ಜೀವನದಲ್ಲಿ ಅದ ಕರಾಳ ಸಂಗತಿಗಳನ್ನು ಬಾಯಿ ಬಿಡುತ್ತಾರೆ.

ಅದೇ ರೀತಿ ಮರಾಠಿ ಚಿತ್ರರಂಗ ಖ್ಯಾತ ನಟಿ ತೇಜಸ್ವಿನಿ ಪಂಡಿತ್ ಕೂಡ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

10 ವರ್ಷಗಳ ಹಿಂದೆ ನಡೆದ ಘಟನೆ ಬಗ್ಗೆ ಸಂದರ್ಶವೊಂದರಲ್ಲಿ ಮನಬಿಚ್ಚಿ ಮಾತನಾಡಿದ ತೇಜಸ್ವಿನಿ, ಕಹಿ ವಿಚಾರಗಳನ್ನು ತಿಳಿಸಿದ್ದಾರೆ.
ಆಗ ತಾನೆ ಸಿನಿಮಾ ರಂಗಕ್ಕೆ ಬಂದ ದಿನಗಳವು. ಹಾಗಾಗಿ ನನ್ನ ಬಳಿ ತುಂಬಾ ಹಣ ಇರಲಿಲ್ಲ. ಒಂದು ರೀತಿಯಲ್ಲಿ ಕಡಿಮೆ ಹಣದಲ್ಲೇ ನಾನು ಬದುಕು ನಡೆಸುತ್ತಿದ್ದೆ. ನನ್ನ ಬಳಿ ಹಣ ಇಲ್ಲ ಅನ್ನು ಕಾರಣಕ್ಕಾಗಿ ಅಂಥದ್ದೊಂದು ಘಟನೆಗೆ ಸಾಕ್ಷಿಯಾಗಬೇಕಾಯಿತು. ಪುಣೆಯ ಅಪಾರ್ಟ್ಮೆಂಟ್ ನಲ್ಲಿ ನಾನು ವಾಸವಿದ್ದೆ. ಆ ಅಪಾರ್ಟ್ಮೆಂಟ್ ಕಾರ್ಪೋರೇಟ್ ಒಬ್ಬರಿಗೆ ಸೇರಿದ್ದಾಗಿತ್ತು. ಬಾಡಿಗೆ ಪಾವತಿಸಲು ಅವರ ಬಳಿ ಹೋದಾಗ, ನೇರವಾಗಿಯೇ ಅವನು ಮಂಚಕ್ಕೆ ಕರೆದ ಎಂದು ಹೇಳಿಕೊಂಡಿದ್ದಾರೆ.

ಕೋಪದಿಂದಲೇ ಅವನಿಗೆ ನೀರಿನ ಲೋಟವನ್ನು ಮುಖಕ್ಕೆ ಎಸೆದು ಬಂದಿದೆ. ಈ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದು ಇಂತ ಕೆಲಸ ಮಾಡುವುದಕ್ಕೆ ಅಲ್ಲ. ಇಲ್ಲದಿದ್ದರೆ ಒಂಥ ಕೆಲಸ ಮಾಡಿಕೊಂಡು ಯಾರಿಗೂ ಕೇರ್ ಮಾಡದೆ ಬದುಕುತ್ತಿದ್ದೆ ಎಂದು ತೇಜಸ್ವಿನಿ ಮಾತನಾಡಿದ್ದಾರೆ.
ಬಳಿಕ ಬೈ ಅರಾಚೆ’ ಸಿನಿಮಾದ ಮೂಲಕ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ತೇಜಸ್ವೀನಿ ಆನಂತರ ಹಲವು ಚಿತ್ರಗಳನ್ನು ಮಾಡಿದ್ದಾರೆ. ಈ ಘಟನೆಯಿಂದಾಗಿ ಅವರು ಎಚ್ಚರಿಕೆಯಿಂದ ಬದುಕಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ತೇಜಸ್ವಿನಿ ಪಂಡಿತ್ ಅಭಿನಯಿಸಿರುವ ವೆಬ್‌ ಸೀರಿಸ್‌ Athang ಬಿಡುಗಡೆಯಾಗುತ್ತಿದೆ. ‘ಇದು ಎರಡು ವಿಚಾರಗಳ ಕಾಂಬಿನೇಷನ್‌ ಆಗಿರಲಿದೆ. ನನ್ನ ವೃತ್ತಿ ಜೀವನದಿಂದ ನನ್ನನ್ನು ಜಡ್ಜ್‌ ಮಾಡುವುದು ಮತ್ತೊಂದು ನಾನು ಆರ್ಥಿಕವಾಗಿ ವೀಕ್ ಆಗಿರುವೆ ಎಂದು ನನ್ನ ಜೊತೆ ಹೀಗೆ ವರ್ತಿಸುವುದು. ಇದರಿಂದ ನಾನು ಜೀವನ ಪಾಠ ಕಲಿತಿರುವೆ’ ಎಂದು ತೇಜಸ್ವಿನಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!