ದುಬೈಗೆ ಹೋಗಿದ್ದ ಉರ್ಫಿಗೆ ʼಲಾರಿಂಜೈಟಿಸ್ʼ ಕಾಯಿಲೆ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ನೇಹಿತರೊಂದಿಗೆ ದುಬೈ ಪ್ರವಾಸದಲ್ಲಿದ್ದ ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಗೆ ಆರೋಗ್ಯ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಪ್ರವಾಸದ ವೇಳೆಯೇ ನಾನು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಸೇರಬೇಕಾಯ್ತು ಎಂದು ಹೇಳಿರುವ ಊರ್ಫಿ ಆಸ್ಪತ್ರೆಯಲ್ಲಿರುವ ವಿಡಿಯೋ ಮಾಡಿದ್ದಾರೆ.
ಚಿತ್ರ ವಿಚಿತ್ರ ಅಶ್ಲೀಲ ವೇಷಗಳಲ್ಲಿ ಕಾಣಿಸಿಕೊಳ್ಳುವ ಊರ್ಫಿ ಅವತಾರಗಳನ್ನು ಕಂಡು ಸಿಟ್ಟಿಗೆದ್ದ ಹಲವರು ಆಕೆ ಮೇಲೆ ದೂರು ದಾಖಲಿಸಿದ್ದಾರೆ. ಸಾಲದೆಂಬಂತೆ ಪಡ್ಡೆ ಹುಡುಗರು ಆಕೆಯ ಬೆನ್ನತ್ತಿ ಕಾಡುತ್ತಿದ್ದಾರೆ. ಈ ನಡುವೆ ಊರ್ಫಿಗೆ ಆರೋಗ್ಯವೂ ಕೈಕೊಟ್ಟಿದೆ. ಊರ್ಫಿಗೆ ಕಾಣಿಸಿಕೊಂಡ ಕಾಯಿಲೆ ಹೆಸರು ʼಲಾರಿಂಜೈಟಿಸ್ʼ ಅಂತೆ. ಹಾಗೆಂದರೆ ಅತಿಯಾದ ಬಳಕೆ, ಕಿರಿಕಿರಿ ಅಥವಾ ಸೋಂಕಿನಿಂದ ಬಾಯಿಯ ಧ್ವನಿ ಪೆಟ್ಟಿಗೆಯ (ಲಾರೆಂಕ್ಸ್) ಉರಿಯೂತವಾಗಿದೆ. ಒಬ್ಬ ವ್ಯಕ್ತಿಯು ಲಾರಿಂಜೈಟಿಸ್‌ನಿಂದ ಬಳಲುತ್ತಿದ್ದರೆ, ಅವನ ಕುತ್ತಿಗೆ ಊದಿಕೊಳ್ಳುತ್ತದೆ. ಪರಿಣಾಮವಾಗಿ, ಅವರ ಧ್ವನಿ ಗಟ್ಟಿಯಾಗುತ್ತದೆ.
ಈ ವಿಚಾರವನ್ನು ಊರ್ಫಿ ಆಸ್ಪತ್ರಯಲ್ಲಿ ಇರುವಾಗಲೇ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾಳೆ. ವೈದ್ಯರು ಅವಳನ್ನು ಮಾತನಾಡದಂತೆ ಗದರಿದ್ದಾರೆ. ಆ ಬಳಿಕ ಊರ್ಫಿ ಬಾಯಿ ಮುಚ್ಚಿಕೊಳ್ಳುವುದನ್ನು ಕಾಣಬಹುದು. ಊರ್ಫಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲವಾಗಿ ಕಾಣಿಸಿಕೊಳ್ಳುತ್ತಾಳೆ ಎಂದು ದೂರು ದಾಖಲಾಗಿದ್ದರಿಂದ ಆಕೆ ತೊಂದರೆಗೆ ಸಿಲುಕಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!