ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಂದಿನ ಐದು ದಿನ ಭಾರೀ ಚಳಿ ಜತೆಗೆ ದಟ್ಟ ಮಂಜು ಆವರಿಸಲಿದೆ.
ತೀವ್ರ ಚಳಿಯಿಂದಾಗಿ ಪಂಜಾಬ್, ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ಶಾಲೆಗಳ ಸಮಯ ಬದಲಾಯಿಸಲಾಗಿದೆ.
ಇನ್ನೂ ಐದು ದಿನ ಪಂಜಾಬ್, ಹರಿಯಾಣ ಹಾಗೂ ಚಂಢೀಗಡದ ಹಲವು ಭಾಗಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಪಶ್ಚಿಮ ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿಯೂ ಮೈಕೊರೆಯುವ ಚಳಿ ಇದ್ದು, ಇನ್ನೂ ಹೆಚ್ಚು ಚಳಿ ಅನುಭವ ಆಗಲಿದೆ. ದೆಹಲಿಯಲ್ಲಿ ಇನ್ನೆರಡು ದಿನದಲ್ಲಿ ತಾಪಮಾನ 4 ಡಿಗ್ರಿ ಸೆಲ್ಶಿಯಸ್ಗೆ ಕುಸಿಯಲಿದೆ ಎಂದು ಹಚಾಮಾನ ಇಲಾಖೆ ತಿಳಿಸಿದೆ.
ಒಂದು ವಾರದಿಂದ ಉತ್ತರ ಭಾರತದಲ್ಲಿ ಭಾರೀ ಚಳಿಯಾಗುತ್ತಿದ್ದು, ಚಳಿಗೆ ಮೂರು ಮಂದಿ ಮೃತಪಟ್ಟಿದ್ದಾರೆ. ಕೆಲವು ಕಡೆ ರಾತ್ರಿ ಬಸ್ ಸಂಚಾರ ನಿಷೇಧಿಸಲಾಗಿದೆ.