ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹಾಗಾಗಿ ಬಿಗ್ಬಾಸ್ ಮನೆಮಂದಿಗೆ ಆಗಾಗ ಊಟ ಕಳಿಸೋದು, ಅವರ ಆಸೆಗಳನ್ನು ಈಡೇರಿಸೋದು ಮಾಡ್ತಿದ್ದಾರೆ.
ಇದೇ ರೀತಿ ಮನೆಗೆ ಮೀನು ಊಟ ಕಳಿಸಿದ್ದು, ರೂಪೇಶ್ ಶೆಟ್ಟಿ ಮೀನು ಊಟ ಮಾಡುವ ಎಕ್ಸೈಟ್ಮೆಂಟ್ನಲ್ಲಿ ಸಾನ್ಯಾ ಯಾರು? ಎಂದು ಕೇಳಿದ್ದಾರೆ.
ಸಾನ್ಯಾ ಹಾಗೂ ರೂಪೇಶ್ ಜೋಡಿಯನ್ನು ಒಟಿಟಿಯಿಂದಲೇ ಜನ ಮೆಚ್ಚಿದ್ದಾರೆ. ಮನೆಯಲ್ಲಿಯೂ ಈ ಜೋಡಿ ಒಟ್ಟಿಗೇ ಇರುತ್ತಿದ್ದು, ಇವರನ್ನು ಬಿಗ್ಬಾಸ್ ಮನೆಯ ಲವ್ ಬರ್ಡ್ಸ್ ಎಂದೇ ಕರೆಯುತ್ತಿದ್ದರು. ಸಾನ್ಯಾ ಹೋದಮೇಲೂ ರೂಪೇಶ್ ಬರೀ ಸಾನ್ಯಾ ಬಗ್ಗೆಯೇ ಮಾತನಾಡುತ್ತಿದ್ದರು. ಇಷ್ಟೆಲ್ಲಾ ಪ್ರೀತಿಯಿಂದ ನಡೆದುಕೊಂಡಿದ್ದ ರೂಪೇಶ್ ಇದೀಗ ಸಾನ್ಯ ಯಾರು ಎಂದು ಪ್ರಶ್ನಿಸಿದ್ದು ಫ್ಯಾನ್ಸ್ಗೆ ಗಾಬರಿಯಾಗಿದೆ.