CINEMA| ಸೌತ್‌ ಸಿನಿಮಾ ಹಾಡುಗಳ ಬಗ್ಗೆ ಮಾತನಾಡಿ ವಿವಾದದಲ್ಲಿ ಸಿಲುಕಿಕೊಂಡ್ರಾ ರಶ್ಮಿಕಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಯಾವುದಾದರೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಬ್ಲಾಕ್‌ಬಸ್ಟರ್ ಸಿನಿಮಾ ‘ಕಾಂತಾರ’ ವಿಚಾರದಲ್ಲಿ ಆಕೆಯನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡಬೇಕು ಎಂಬ ಟೀಕೆ ಎದುರಿಸಿದ್ದರು. ಇದೀಗ ಸೌತ್ ಸಿನಿಮಾಗಳ ಬಗ್ಗೆ ಮಾಡಿರುವ ಕಾಮೆಂಟ್‌ಗಳು ವಿವಾದಕ್ಕೀಡಾಗಿವೆ. ರಶ್ಮಿಕಾ ಪ್ರಸ್ತುತ ಹಿಂದಿ ಸ್ಪೈ ಥ್ರಿಲ್ಲರ್ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸುತ್ತಿದ್ದಾರೆ.

ಈ ಸಿನಿಮಾದ ಪ್ರಚಾರದ ಭಾಗವಾಗಿ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ರಶ್ಮಿಕಾ ಭಾಗವಹಿಸಿದ್ದರು.. “ಬಾಲಿವುಡ್ ರೊಮ್ಯಾಂಟಿಕ್ ಹಾಡುಗಳು ಎಲ್ಲರನ್ನೂ ಆಕರ್ಷಿಸುತ್ತವೆ. ನನ್ನ ಬಾಲ್ಯದಿಂದಲೂ ನನಗೆ ರೊಮ್ಯಾಂಟಿಕ್ ಹಾಡುಗಳೆಂದರೆ ಅವು ಬಾಲಿವುಡ್ ಹಾಡುಗಳಾಗಿವೆ. ಆದರೆ ಸೌತ್ ನಲ್ಲಿ ಮಾಸ್ ಮಸಾಲಾ ಹಾಡುಗಳು, ಐಟಂ ನಂಬರ್‌ಗಳು, ಡ್ಯಾನ್ಸ್ ನಂಬರ್‌ಗಳು” ಎಂದು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.

ವಾಸ್ತವವಾಗಿ, ರಶ್ಮಿಕಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ರೊಮ್ಯಾಂಟಿಕ್ ಹಾಡುಗಳೊಂದಿಗೆ ದಕ್ಷಿಣದಲ್ಲಿ ಖ್ಯಾತಿಯನ್ನು ಗಳಿಸಿದರು. ಈಕೆ ನಟಿಸಿದ ಕಿರಿಕ್ ಪಾರ್ಟಿ, ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ರೊಮ್ಯಾಂಟಿಕ್ ಹಾಡುಗಳು ಎಷ್ಟು ಹಿಟ್ ಆಗಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳಿರುವಾಗ ಸೌತ್ ಸಿನಿಮಾಗಳನ್ನು ಈ ರೀತಿ ಕೀಳಾಗಿ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ. ಮತ್ತು ರಶ್ಮಿಕಾ ಈ ವಿವಾದವನ್ನು ಹೇಗೆ ಎದುರಿಸುತ್ತಾರೆ ಎಂದು ನೋಡೋಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!