ಹೊಸ ದಿಗಂತ ಡಿಜಿಟಲ್ ಡೆಸ್ಕ್:
2023ರಲ್ಲಿ ಕನಿಷ್ಠ ಎರಡು ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTAs) ಸಹಿ ಹಾಕಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗುರುವಾರ ಭರವಸೆ ನೀಡಿದ್ದಾರೆ.
ಅವರು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಯುಕೆ, ಯುರೋಪಿಯನ್ ಯೂನಿಯನ್ ಮತ್ತು ಕೆನಡಾದೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಭಾರತ ಇಂದು ಶಕ್ತಿಯುತವಾಗಿ ಮಾತನಾಡುತ್ತಿದೆ. ನಾವು ವಿಶ್ವಾಸದಿಂದ ಮಾತುಕತೆ ನಡೆಸುತ್ತೇವೆ. ‘ಈ ವರ್ಷ ದೇಶವು ಕನಿಷ್ಠ ಎರಡು ಎಫ್ ಟಿಎಗಳಿಗೆ ಸಹಿ ಹಾಕಲಿದೆ ಎಂದು ಅವರು ಹೇಳಿದರು.